ಭಟ್ಕಳ ಡೈರಿ ವರದಿ
ಭಟ್ಕಳ: ಮನೆಯ ಮುಂಭಾಗದ ತೆಂಗಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಷಕಾರಿ ಹಾವು ಕಡಿದು ೭೫ ವರ್ಷದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಮಣ್ಣೊಂಡದಲ್ಲಿ ನಡೆದಿದೆ. ಮೃತರನ್ನು ಮಣ್ಣೊಂಡ ನಿವಾಸಿ ನಾಗಮ್ಮ ದುರ್ಗಪ್ಪ ನಾಯ್ಕ (೭೫) ಎಂದು ಗುರುತಿಸಲಾಗಿದೆ.
ನಾಗಮ್ಮ ಅವರು ಮನೆಯ ಮುಂಭಾಗದಲ್ಲಿರುವ ತೆಂಗಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಡಿದಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೃತರ ತಮ್ಮ ಮಂಜುನಾಥ ನಾಯ್ಕ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:
ಬೈಂದೂರು ಬಳಿ ಭೀಕರ ಬೈಕ್ ಅಪಘಾತ: ಭಟ್ಕಳದ ಮೀನುಗಾರ ಸಾವು, ಪತ್ನಿಗೆ ಗಾಯ




