ಶಿವಮೊಗ್ಗ: ನಗರದ ಕೆ.ಆರ್.ಪುರಂ ವಾಸಿ ಹಾಗೂ ತಮಿಳು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಿ. ರಾಮಚಂದ್ರನ್ (೯೧ ವರ್ಷ) ತಮ್ಮ ಸ್ವಗೃಹದಲ್ಲಿ ನಿನ್ನೆ ಸಂಜೆ ನಿಧನರಾದರು. ಇವರಿಗೆ ಇಬ್ಬರು ಪುತ್ರಿಯರು, ಮೂವರು ಪುತ್ರರು ಇದ್ದಾರೆ. ಇವರ ಅಂತ್ಯ ಸಂಸ್ಕಾರವನ್ನು ಗುಡ್ಡೆಕಲ್ ಸ್ಮಶಾನದಲ್ಲಿ ನೆರವೇರಿಸಲಾಯಿತು.

ಇದನ್ನೂ ಓದಿ : ನಮ್ಮ ನೂತನ ವೆಬ್‌ಸೈಟ್‌ “ಭಟ್ಕಳ ಡೈರಿ”ಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ

ಇವರ ಬಳಿ ಶಿಕ್ಷಣ ಪಡೆದ ತಮಿಳು ಸಮಾಜದ ಹಲವು ಮುಖಂಡರು ಉನ್ನತ ಸ್ಥಾನದಲ್ಲಿದ್ದಾರೆ. ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಬಿ. ರಾಮಚಂದ್ರನ್‌ರವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ : ಗಂಟಲಲ್ಲಿದ್ದ ಮೀನು ತೆಗೆದು 11 ತಿಂಗಳ ಮಗುವಿನ ಪ್ರಾಣ ಉಳಿಸಿದ ಸರ್ಜಿ ಆಸ್ಪತ್ರೆಯ ವೈದ್ಯರು

ತಮಿಳು ಸಂಘ ಹಾಗೂ ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ ಎಂ., ಉಪಾಧ್ಯಕ್ಷ ಡಾ|| ಪರಮೇಶ್ವರ್ ಡಿ ಶಿಗ್ಗಾಂವ್, ಸುರೇಶ್ ಕುಮಾರ್ ಬಿ., ಕಾರ್ಯದರ್ಶಿ ರಾಮಚಂದ್ರ ಎಸ್.ಸಿ., ಖಜಾಂಚಿ ವಿಜಯ್ ಕುಮಾರ್ ಹಾಗೂ ಟ್ರಸ್ಟಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಈ ವಿಡಿಯೋ ನೋಡಿ: ಕಿತ್ರೆ ದೇವಿಮನೆಗೆ ರಾಘವೇಶ್ವರ ಭಾರತೀ ಸ್ವಾಮಿಗಳ ಆಗಮನ  https://fb.watch/qiHC7SoLgB/?mibextid=Nif5oz