ಭಟ್ಕಳ(Bhatkal): ಇಲ್ಲಿನ ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಹೆಜ್ಜೇನು (Honey bee) ದಾಳಿ ಮಾಡಿದೆ. ಇನ್ನೊಂದೆಡೆ ಬಂಗಾರಮಕ್ಕಿ ಕ್ರಾಸ್ ಬಳಿ ವ್ಯಕ್ತಿ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ದಾಳಿಗೊಳಗಾದವರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜಾಲಿಕೋಡಿಯಲ್ಲಿ ಮಾಸ್ತಮ್ಮ ಮಂಜಪ್ಪ ನಾಯ್ಕ (70), ಜಾನಕಿ ನಾಯ್ಕ (37) ಮತ್ತು ಸುರೇಶ ನಾಯ್ಕ (45) ಹೆಜ್ಜೇನು ದಾಳಿಗೊಳಗಾದವರು. ಇಂದು ಮಂಗಳವಾರ ಏಕಾಏಕಿ ಎಲ್ಲಿಂದಲೋ ಬಂದ ಹೆಜ್ಜೇನು (Honey bee) ಮನೆಯ ಒಳಗಡೆ ಇದ್ದ ಮೂವರ ಮೇಲೆ ದಾಳಿ ಮಾಡಿದೆ. ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ೭೦ ವರ್ಷದ ವೃದ್ಧೆ ಸ್ಥಿತಿ ಗಂಭೀರವಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿರುವ ಐ.ಸಿ.ಯು.ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಚಿರತೆ ಉಗುರು, ಹಲ್ಲುಗಳ ಸಾಗಣೆ ಪತ್ತೆ; ಆರೋಪಿ ವಶಕ್ಕೆ
ಅದೇ ರೀತಿ ಶಿರಾಲಿ ಮಲ್ಲಾರಿ ನಿವಾಸಿ ಗಣಪತಿ ಮಂಜಯ್ಯ ನಾಯ್ಕ (೫೫) ಮಲ್ಲಾರಿಯ ತಮ್ಮ ಮನೆಯಿಂದ ಮಾರುಕಟ್ಟೆಗೆಂದು ಬರುತ್ತಿದ್ದ ವೇಳೆ ಹೆಜ್ಜೇನು ದಾಳಿ ಮಾಡಿದೆ. ಶಿರಾಲಿಯ ಬಂಗಾರಮಕ್ಕಿ ಕ್ರಾಸ್ ಸಮೀಪ ಜೇನು ಹುಳುಗಳು ದಾಳಿ ಮಾಡಿದೆ. ಇವರು ಕೂಡ ಸದ್ಯ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಶಿರೂರಿನಲ್ಲಿ ಮುಂದಿನ ಕಾರ್ಯಾಚರಣೆ ಅಗತ್ಯವಿಲ್ಲ