ಬೆಂಗಳೂರು (Bengaluru) : ಕಾರವಾರದ (Karwar) ಕಾಂಗ್ರೆಸ್‌ ಶಾಸಕ (Congress MLA) ಸತೀಶ್ ಸೈಲ್ (Satish Sail) ಅಪರಾಧಿ ಎಂದು ೮೨ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು (Judgement) ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಾಳೆ ಘೋಷಿಸಲಿದೆ.  ಆರೋಪಿಗಳ ಪೊಲೀಸ್ ಕಸ್ಟಡಿ ಪಡೆಯದಂತೆ ಸತೀಶ ಸೈಲ್‌ ಪರ ವಕೀಲರ ಮನವಿಯನ್ನು ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ತಿರಸ್ಕರಿಸಿದ್ದಾರೆ. ಒಮ್ಮೆ ತೀರ್ಪು ನೀಡಿದ ಮೇಲೆ ಅವಕಾಶ ಇಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂಕೋಲಾ (Ankola) ತಾಲೂಕಿನ ಬೇಲೇಕೇರಿ (Belekeri) ಬಂದರಿನ ಅದಿರು ನಾಪತ್ತೆ ಪ್ರಕರಣದಲ್ಲಿ ಮೊದಲ ಮೂರು ಕೇಸ್ ನಲ್ಲಿ ತೀರ್ಪು ಘೋಷಣೆಯಾಗಿದೆ. ಶಾಸಕ ಸತೀಶ ಸೈಲ್ ಸೇರಿದಂತೆ ಎಲ್ಲಾ ಆರೋಪಿಗಳು ದೋಷಿಗಳು ಎಂದು ನ್ಯಾಯಾಲಯ ತೀರ್ಪಿತ್ತಿದೆ (Judgement). ಎಲ್ಲ ಅಪರಾಧಿಗಳ ಕಸ್ಟಡಿಗೆ ಪಡೆಯಲು ಕೋರ್ಟ್ ಸೂಚನೆ ನೀಡಿದೆ. 6 ಪ್ರಕರಣಗಳ ತನಿಖೆ ನಡೆಸಿದ್ದ ಸಿಬಿಐ (CBI), ಚಾರ್ಜ್ ಶೀಟ್ ಸಲ್ಲಿಸಿತ್ತು. ಅಷ್ಟೂ ಕೇಸ್ಗಳಲ್ಲಿ  ಕೋರ್ಟ್‌  ಪ್ರತಿವಾದ ಆಲಿಸಿತ್ತು. ಶಾಸಕ ಸತೀಶ್ ಸೈಲ್ ಅವರನ್ನು ಕೋರ್ಟ್‌ ಪೊಲೀಸರು ವಶಕ್ಕೆ ಪಡೆಯಲಿದ್ದು, ಅನಂತರ ಜೈಲು ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ :  ಭಟ್ಕಳ ನ್ಯಾಯಾಧೀಶರ ಮಾನವೀಯ ಕಾರ್ಯ