ಕಾರವಾರ (Karwar): ಗಣೇಶ ಹಬ್ಬದಲ್ಲಿ(Ganesh Festival) ಸಹೋದರರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ (Murder Case) ಅಂತ್ಯವಾದ ದಾರುಣ ಘಟನೆ ಕಾರವಾರದ ಸಾಯಿಕಟ್ಟಾ ಬಿಂದುಮಾಧವ ದೇವಸ್ಥಾನದ ಬಳಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಂದೇಶ ಪ್ರಭಾಕರ ಬೋರ್ಕರ ಹತ್ಯೆಗೊಳಗಾದ ದುರ್ದೈವಿ. ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಬಳಿಕ ಹಣದ ವ್ಯವಹಾರದ ಕುರಿತು ಗಲಾಟೆ ನಡೆದಿದೆ. ಪ್ರಭಾಕರ ಬೋರ್ಕರ ಹಾಗೂ ಸಹೋದರ ಮನೋಹರ ಬೋರ್ಕರ ನಡುವೆ ಗಲಾಟೆ ನಡೆದಿತ್ತು. ಕಳೆದ ವರ್ಷ ಗಣೇಶ ಹಬ್ಬದಲ್ಲಿ ಮಾಡಿದ ಹಣದ ಖರ್ಚಿನ ಮಾಹಿತಿ ನೀಡದ್ದಕ್ಕೆ ಗಲಾಟೆ ಆರಂಭಗೊಂಡಿತ್ತು.
ಇದನ್ನೂ ಓದಿ : ಖುದ್ದು ಬೋಟ್ ಚಲಾಯಿಸಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ ಸಚಿವ
ತಂದೆ ಪ್ರಭಾಕರ ಜೊತೆ ಜಗಳವಾಡುತ್ತಿದ್ದ ಮನೋಹರನನ್ನು ಹಿರಿಯ ಪುತ್ರ ಸಂದೇಶ ತಡೆಯಲು ಮುಂದಾದ. ಈ ವೇಳೆ ಸಂದೇಶಗೆ ಮನೋಹರನ ಕಿರಿಯ ಪುತ್ರ ಮನೀಶ್ ಬೋರ್ಕರ ಚಾಕು ಇರಿದಿದ್ದಾನೆ (Murder Case). ಸಂದೇಶನನ್ನ ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಕಾರವಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).
ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಸರ್ಕಾರಿ ಆಸ್ಪತ್ರೆಗೆ ಏರ್ಪೋರ್ಟ್ ಕುರ್ಚಿ ಹಸ್ತಾಂತರ