ಭಟ್ಕಳ: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಭಟ್ಕಳ (Bhatkal) ನಗರದ ಬಂದರ್ ರಸ್ತೆ ಎರಡನೇ ಕ್ರಾಸ್ ಬಳಿ ಹಾಕಲಾಗಿದ್ದ ಇಸ್ಲಾಮಿಕ್ ಬಾವುಟವನ್ನು (Islamic flag) ನಗರಸಭೆ ತೆರವುಗೊಳಿಸಿದ ಘಟನೆಗೆ ಸಂಬಂಧಿಸಿ ಸ್ಥಳೀಯ ಮುಸ್ಲಿಮರು ಶನಿವಾರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾರ್ಚ್ ೧೯ರಂದು ಸಂಜೆ ಬಂದರ್ ರಸ್ತೆ ೨ನೇ ಕ್ರಾಸ್ ಯು-ಟರ್ನ್ ಬಳಿ ಡಿವೈಡರ್ ಮಧ್ಯದಲ್ಲಿ ಸುಮಾರು ೨೦ರಿಂದ ೨೫ ಅಡಿ ಉದ್ದದ ಕಬ್ಬಿಣದ ಪೈಪ್ ಸ್ಥಾಪಿಸಿ, ಹಸಿರು ಬಣ್ಣದ ಉರ್ದು ಲಿಪಿಯ ಬರಹ ಹಾಗೂ ಖಡ್ಗದ ಚಿಹ್ನೆ ಹೊಂದಿದ್ದ ಬಾವುಟವನ್ನು (Islamic flag) ಹಾರಿಸಲಾಗಿತ್ತು. ರಂಜಾನ್ ಹಬ್ಬದ ಅಂಗವಾಗಿ ಈ ವ್ಯವಸ್ಥೆ ಮಾಡಲಾಗಿತ್ತು.
CM medal/ ಶಹರ ಠಾಣೆಯ ಪಿಎಸ್‌ಐಗೆ ಮುಖ್ಯಮಂತ್ರಿ ಬಂಗಾರದ ಪದಕ
ಶನಿವಾರ ನಗರಸಭೆ ಕಮಿಷನರ್ ಬಾಬಾಸಾಹೇಬ್ ಮಾಣೆ ಅವರ ನೇತೃತ್ವದಲ್ಲಿ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಬಾವುಟವನ್ನು ತೆರವುಗೊಳಿಸಲಾಯಿತು. ಈ ವೇಳೆ ಯಾವುದೇ ತಕ್ಷಣದ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ ಬಳಿಕ ಮಧ್ಯಾಹ್ನ ಸುಮಾರು ೫೦ ಮಂದಿ ಮುಸ್ಲಿಮರು, ಪುರಸಭೆಯ ಮಾಜಿ ಸದಸ್ಯ ಅಲ್ತಾಫ್ ಖರೂರಿ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ ಮತ್ತೆ ಬಾವುಟ ಹಾರಿಸಲು ಯತ್ನಿಸಿದರು. ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಅದನ್ನು ತಡೆದು, ಬಾವುಟವನ್ನು ಮತ್ತೆ ತೆರವುಗೊಳಿಸಿದರು.
Bhatkal/ ಭಟ್ಕಳದಲ್ಲಿ ವೃದ್ಧ ನೇಣಿಗೆ ಶರಣು
ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಪ್ರತಿಭಟನಾರ್ಥವಾಗಿ ಬಂದರ್ ರಸ್ತೆ ಬಂದ್ ಮಾಡಲು ಯತ್ನಿಸಲಾಯಿತು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡದೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟರು. ವಿಷಯದ ಕುರಿತು ಚರ್ಚಿಸಲು ಸಮುದಾಯದ ಮುಖಂಡರನ್ನು ಡಿವೈಎಸ್ಪಿ (Dysp) ಕಚೇರಿಗೆ ಕರೆದುಕೊಂಡು ಹೋಗಿ ಸಭೆ ನಡೆಸಲಾಗಿದೆ. ಸಭೆಯ ಬಳಿಕ, ಬಾವುಟವನ್ನು ತೆರವುಗೊಳಿಸಿದ ಸ್ಥಳಕ್ಕೆ ಆಗಮಿಸಿದ ಸಮುದಾಯದವರು ತಾತ್ಕಾಲಿಕವಾಗಿ ಬಾವುಟವನ್ನು ಹಾಕಿ ಸ್ವಲ್ಪ ಸಮಯದ ಬಳಿಕ ತಾವೇ ತೆರವುಗೊಳಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
Brahmarathotsava/ ಭಟ್ಕಳ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಶಾಂತಿಯುತ ಸಂಪನ್ನ



