ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ಮಾರುಕೇರಿ ಗ್ರಾಮದ ಕೋಟಖಂಡ ಸರ್ಕಲ್ ಸಮೀಪ ಕಿರಾಣಿ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೋಟಖಂಡ ನಿವಾಸಿ ನಾಗಪ್ಪ ಮಾಸ್ತಿ ಗೊಂಡ (೫೨) ಪ್ರಕರಣದ ಆರೋಪಿಯಾಗಿದ್ದಾರೆ. ಇವರು ಕಿರಾಣಿ ಅಂಗಡಿ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಪೊಲೀಸ್ ದಾಖಲೆ ತಿಳಿಸಿದೆ.

ದಿನಾಂಕ ೨೩-೧೦-೨೦೨೬ರಂದು ಸಂಜೆ ೭.೫೦ರ ವೇಳೆಗೆ ಮಾರುಕೇರಿ ಗ್ರಾಮದ ಕೋಟಖಂಡ ಸರ್ಕಲ್ ಸಮೀಪದ ಕಿರಾಣಿ ಅಂಗಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ, ಅಗತ್ಯ ಪರವಾನಿಗೆ ಪಡೆಯದೆ ಗಿರಾಕಿಗಳಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಆರೋಪಿಯು ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ ೧೫(ಎ) ಮತ್ತು ೩೨(೩)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾಧಿಕಾರಿ ಪಿಎಸ್‌ಐ ಭರಮಪ್ಪ ಬೆಳಗಲಿ ಕೈಗೊಂಡಿದ್ದಾರೆ.

ಇದನ್ನೂ ಓದಿ:

ಭಟ್ಕಳದಲ್ಲಿ ಬೊಲೆರೋ–ಟಿಪ್ಪರ್ ನಡುವೆ ಅಪಘಾತ: ಮೂವರಿಗೆ ಗಾಯ

ಭಟ್ಕಳದಲ್ಲಿ ನ.೧ರಂದು ಆರ್‌ಎಸ್‌ಎಸ್ ಭವ್ಯ ಪಥಸಂಚಲನ: ಗಣವೇಷ ಖರೀದಿಗೆ ವ್ಯವಸ್ಥೆ

ಭಟ್ಕಳ ಡೈರಿ | ಸ್ಥಳೀಯ ಸುದ್ದಿಗಳಿಗಾಗಿ ನಿಮ್ಮ ವಿಶ್ವಾಸಾರ್ಹ ವೇದಿಕೆ