ಭಟ್ಕಳ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೂಲಿ ಕೆಲಸ ಮಾಡಿಕೊಂಡಿದ್ದ ಭಟ್ಕಳ (Bhatkal) ತಾಲೂಕಿನ ಯಲ್ವಡಿಕವೂರ ಪುರವರ್ಗದ ರೈಲ್ವೆ ಗೇಟ್ ಹತ್ತಿರದ ನಿವಾಸಿ ಸೋಮಯ್ಯ ಸುಕ್ರಪ್ಪ ನಾಯ್ಕ (೭೦) ಮೃತರು. ಇವರು ತಮಗೆ ಇರುವ ಹೊಟ್ಟೆ ನೋವನ್ನು ತಾಳಲಾರದೆ ಜೀವನದಲ್ಲಿ ಬೇಸರಗೊಂಡು ಸಾವಿಗೆ ಶರಣಾಗಿದ್ದಾರೆ. ಮಾ ೨೬ರಂದು ಮಧ್ಯಾಹ್ನ ೩-೪೫ ಗಂಟೆಯಿಂದ ೪-೩೦ ಗಂಟೆ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಜಗುಲಿಯ ಮೇಲ್ಚಾವಣಿಯ ಪಕಾಶಿಗೆ ಹಗ್ಗದಿಂದ ಉರುಳು ಹಾಕಿಕೊಂಡಿದ್ದಾರೆ. ಈ ಕುರಿತು ಮೃತರ ಮಗ ಅಣ್ಣಪ್ಪ ಸೋಮಯ್ಯ ನಾಯ್ಕ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Brahmarathotsava/ ಭಟ್ಕಳ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಶಾಂತಿಯುತ ಸಂಪನ್ನ