ಭಟ್ಕಳ: ಕರ್ನಾಟಕದ (Karnataka) ಉತ್ತರ ಕನ್ನಡ (Uttara Kannada) ಜಿಲ್ಲೆಯ ಕೋಮು ಸೂಕ್ಷ್ಮ ಕರಾವಳಿ (coastal) ಪಟ್ಟಣ ಭಟ್ಕಳ ಗುರುವಾರ ರಾತ್ರಿಯ ಉದ್ವಿಗ್ನತೆಯ ನಂತರ ಮತ್ತೆ ನಿರಾಳವಾಯಿತು. ಗುರುವಾರ ತಡರಾತ್ರಿ ಗುಂಪು ಘರ್ಷಣೆ ಭುಗಿಲೆದ್ದ ನಂತರ, ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜನಜೀವನ ಸಹಜ ಸ್ಥಿತಿಯಲ್ಲಿತ್ತು. ರಥಬೀದಿಯ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ (Brahmarathotsava) ಯಾವುದೇ ಅಡಚಣೆಯಿಲ್ಲದೆ ಶಾಂತಿಯುತವಾಗಿ ನಡೆದಿದ್ದು ಶುಕ್ರವಾರದ ವಿಶೇಷ. ಮುಸ್ಲಿಂ ಸಮುದಾಯದ ಶುಕ್ರವಾರದ ಪ್ರಾರ್ಥನೆಯೂ ಶಾಂತಿಯುತವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಪಟ್ಟಣದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ಪಟ್ಟಣದ ಗ್ರಾಮ ದೇವರಾದ ಚೆನ್ನಪಟ್ಟಣ ಹನುಮಂತ ದೇವರ ಮಹಾರಥೋತ್ಸವದ (Brahmarathotsava) ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ-ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ರಥಕಾಣಿಕೆಗಾಗಿ ಸರತಿ ಸಾಲಿನಲ್ಲಿ ನಿಂತು ಫಲಪುಷ್ಪವನ್ನು ದೇವರಿಗೆ ಅರ್ಪಿಸಿದರು.

ಭಟ್ಕಳ ರಥೋತ್ಸವದ ವಿಡಿಯೋವನ್ನು  ಯೂಟ್ಯೂಬ್ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಂ ನಲ್ಲಿ ವೀಕ್ಷಿಸಬಹುದು.

ಭಟ್ಕಳ ತಾಲೂಕಿನ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಊರುಗಳಿಂದ ಆಗಮಿಸಿದ ಸಹಸ್ರಾರು ಜನರು ಪೂಜೆ ಪುನಸ್ಕಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Workshop/ ಮಾ ೩೧ರಂದು ಸಿಎ-ಸಿಎಸ್ ಕುರಿತು ವೃತ್ತಿ ಜಾಗೃತಿ ಮಾಹಿತಿ ಕಾರ್ಯಾಗಾರ

ಸಂಜೆ ೫ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ವಾಡಿಕೆಯಂತೆ ಚರ್ಕಿನ್ ಮತ್ತು ಜೈನ ಮನೆತನಕ್ಕೆ ಆಮಂತ್ರಣ ನೀಡಲಾಯಿತು. ಮಹಾರಥವನ್ನು ದೇವಸ್ಥಾನದ ಎದುರಿನ ಹೂವಿನ ಪೇಟೆ, ಮಾರಿಗುಡಿಯ ಮೂಲಕ ಜನತಾ ಬ್ಯಾಂಕಿನ ಎದುರಿನಿಂದ ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ಎಳೆಯಲಾಯಿತು.

Heavy security/ ಭಟ್ಕಳದಲ್ಲಿ ಭಾರಿ ಬಂದೋಬಸ್ತ್: ನಗರದಲ್ಲಿ ಪೊಲೀಸ್ ಪರೇಡ್ 

ಈ ಬಾರಿ ಡೊಳ್ಳು ಕುಣಿತ, ಭಜನೆ,  ವಾದ್ಯಗೋಷ್ಠಿ ಜನಮನ ಸೆಳೆದವು. ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕರಾದ ಸುನೀಲ ನಾಯ್ಕ, ಜೆ ಡಿ ನಾಯ್ಕ ಮತ್ತಿತರರು ರಥೋತ್ಸವಕ್ಕೆ ಆಗಮಿಸಿ ರಥಾರೂಡನಾದ ಹನುಮಂತನ ದರ್ಶನ ಪಡೆದರು. ದೇವಸ್ಥಾನದ ಧರ್ಮದರ್ಶಿಗಳು  ಉಪಸ್ಥಿತರಿದ್ದರು.  ಭಟ್ಳಳ ಉಪವಿಭಾಗದ ಡಿವೈಎಸ್‌ಪಿ ಗೀರೀಶ ಬಿ ನೇತೃತ್ವದಲ್ಲಿ ಪಿಐ ದಿವಾಕರ ಪಿ ಎಂ ಸುರಕ್ಷತೆಯನ್ನು ಒದಗಿಸಿದ್ದು, ಶಾಂತಿಯುತವಾಗಿ ಬ್ರಹ್ಮರಥೋತ್ಸವ ಜರುಗಿದೆ.

LPG prices/ ಎಲ್‌ಪಿಜಿ ಬೆಲೆಯಲ್ಲಿ ಅನಿಯಂತ್ರಿತ ಏರಿಕೆ: ಆಟೋ ರಿಕ್ಷಾ ಚಾಲಕರ ಅಸಮಾಧಾನ