ಭಟ್ಕಳ: ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ನೇಹ ಬಂಧು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (Women’s Day) ಕಾರ್ಯಕ್ರಮ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ ಪುಷ್ಪಲತಾ ಮಂಕಾಳ ವೈದ್ಯ ಮಾತನಾಡಿ, ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸ್ವಾವಲಂಭಿ ಬದುಕು ಕಟ್ಟಿಕೊಳ್ಳುತ್ತಿರುವುದು ಗಮನಾರ್ಹ. ಮಹಿಳಾ ಒಕ್ಕೂಟಗಳು ವಿವಿಧ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು.
Islamic flag/ ಹಸಿರು ಬಾವುಟ ತೆರವಿಗೆ ಮುಸ್ಲಿಮರ ಆಕ್ಷೇಪ: ಮತ್ತೆ ಬಾವುಟ ಹಾರಾಟಕ್ಕೆ ಪೊಲೀಸರ ತಡೆ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಹೇಮಾವತಿ ಮೊಗೇರ, ಮಹಿಳೆಯರ ಆರೋಗ್ಯ, ಮುಟ್ಟಿನ ನೈರ್ಮಲ್ಯ, ವೈಯಕ್ತಿಕ ಸ್ವಚ್ಛತೆ ಹಾಗೂ ಅನಿಮಿಯಾ ಕುರಿತು ಜಾಗೃತಿ ಮೂಡಿಸಿದರು. ಬ್ಯಾಂಕ್ ಆಫ್ ಬರೋಡಾ ಶಿರಾಲಿ ಶಾಖೆಯ ವ್ಯವಸ್ಥಾಪಕ ಶ್ರೀನಿಧಿ, ಬ್ಯಾಂಕಿಂಗ್ ಸೇವೆಗಳ ಕುರಿತು ವಿವರಿಸಿದರು. ಗ್ರಾಮ ಆಡಳಿತಾಧಿಕಾರಿ ಲತಾ ನಾಯ್ಕ ಗ್ರಾಮೀಣ ಮಹಿಳೆಯರ ಸ್ಥಿತಿ-ಗತಿಗಳ ಕುರಿತು ಮಾತನಾಡಿದರು. ಬೆಂಗ್ರೆ ಗ್ರಾಮ ಪಂಚಾಯತ್ ಪಿಡಿಓ ರಮೇಶ ನಾಯ್ಕ, ಪಂಚಾಯತ್ ಮೂಲಕ ಲಭ್ಯವಿರುವ ಸೌಲಭ್ಯಗಳನ್ನು ವಿವರಿಸಿದರು.
CM medal/ ಶಹರ ಠಾಣೆಯ ಪಿಎಸ್‌ಐಗೆ ಮುಖ್ಯಮಂತ್ರಿ ಬಂಗಾರದ ಪದಕ
ಒಕ್ಕೂಟದ ಅಧ್ಯಕ್ಷೆ ಮೋಹಿನಿ ಮೊಗೇರ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶಾಂತಿಕಾ ನಾಯಕ, ವಲಯ ಮೇಲ್ವಿಚಾರಕ ಗೋಪಾಲ ನಾಯ್ಕ ಸೇರಿದಂತೆ ವೆಂಕಟೇಶ ದೇವಡಿಗ, ದಿವ್ಯಾ ಶೆಟ್ಟಿ, ಉಷಾ ದೇವಡಿಗ, ಗೌತಮಿ ಬಾಗಲ್ ಹಾಗೂ ಸದಸ್ಯರು, ಸಿಬ್ಬಂದಿ, ಸ್ವಸಹಾಯ ಸಂಘಗಳ ಮಹಿಳೆಯರು ಉಪಸ್ಥಿತರಿದ್ದರು.
Bhatkal/ ಭಟ್ಕಳದಲ್ಲಿ ವೃದ್ಧ ನೇಣಿಗೆ ಶರಣು
ಈ ಸಂದರ್ಭದಲ್ಲಿ ಮಹಿಳಾ ದಿನಾಚರಣೆ (Women’s Day) ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮೇಘನಾ ಕಾಜುಮನೆ ಸ್ವಾಗತಿಸಿದರು. ತನುಜಾ ನಾಯ್ಕ ವರದಿ ವಾಚಿಸಿದರು. ಜ್ಯೋತಿ ದೇವಡಿಗ ನಿರೂಪಣೆ ಮಾಡಿದರು. ಭವಾನಿ ಮೊಗೇರ ವಂದಿಸಿದರು.
Brahmarathotsava/ ಭಟ್ಕಳ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಶಾಂತಿಯುತ ಸಂಪನ್ನ



