ಭಟ್ಕಳ (Bhatkal): ಶಂಸುದ್ದಿನ್ ಸರ್ಕಲ್ ಸಮೀಪ ಪಾದಚಾರಿ ವೃದ್ಧೆಯೋರ್ವಳ ಮೇಲೆ ಖಾಸಗಿ ಬಸ್ ಯುಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಹರಿದುಹೋದ ಹಿನ್ನೆಲೆ ಗಂಭೀರವಾಗಿ ಗಾಯಗೊಂಡ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೃತ ವೃದ್ಧೆಯನ್ನು ಶಿರಾಲಿ ಚಿತ್ರಾಪುರ ನಿವಾಸಿ ಲಕ್ಷ್ಮೀ ಜಟ್ಟ ನಾಯ್ಕ (೭೦) ಎಂದು ಗುರುತಿಸಲಾಗಿದೆ. ಭಟ್ಕಳದಿಂದ ಬೆಂಗಳೂರಿಗೆ ತೆರಳುವ ಖಾಸಗಿ ಬಸ್ ಹೊನ್ನಾವರ ಕಡೆಯಿಂದ ಬಂದು ಭಟ್ಕಳ (Bhatkal) ಶಂಸುದ್ದಿನ್ ಸರ್ಕಲ್ ನಲ್ಲಿ ಯೂಟರ್ನ್ ತೆಗದುಕೊಳ್ಳುತ್ತಿದ್ದ ವೇಳೆ ವೃದ್ಧೆಯ ಮೇಲೆ ಹರಿದಿದೆ. ಪರಿಣಾಮ ವೃದ್ಧೆ ಒಂದು ಕಾಲು ಸಂಪೂರ್ಣ ಜಜ್ಜಿ ಹೋಗಿದೆ.
ಇದನ್ನೂ ಓದಿ : tipper collide with scooter/ ಗ್ರಾಮ ಲೆಕ್ಕಾಧಿಕಾರಿಗೆ ಗಾಯ
ಬಳಿಕ ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಸಾಗಿಸಲಾಗಿತ್ತು. ಆಸ್ಪತ್ರೆಯ ಐ. ಸಿ.ಯು ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : Pooja Gandhi/ ಮುರುಡೇಶ್ವರ, ಇಡಗುಂಜಿಗೆ ಪೂಜಾ ಗಾಂಧಿ ಭೇಟಿ