ಭಟ್ಕಳ: ಇಲ್ಲಿನ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿಸಿದ ಬಳಿಕ ನಗರಸಭೆ ಪೌರಾಯುಕ್ತರಾಗಿ (Bhatkal Municipal Commissioner) ಬಾಬಾ ಸಾಹೇಬ ಮಾನೆ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪಟ್ಟಣವಾಗಿದ್ದ ಭಟ್ಕಳವನ್ನು ಸಣ್ಣ ನಗರ ಎಂದು ಅಧೀಕೃತವಾಗಿ ಘೋಷಿಸಿರುವ ರಾಜ್ಯ ಸರ್ಕಾರ, ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯಿತಿ ಪ್ರದೇಶವನ್ನೊಳಗೊಂಡು 22.67 ಚದರ ಕಿ ಮೀ ವ್ಯಾಪ್ತಿಯನ್ನು ‘ಭಟ್ಕಳ ನಗರಸಭೆ’ಯಾಗಿ ರಚಿಸಿ ಅಂತಿಮ ಅಧಿಸೂಚನೆ ಹೊರಡಿಸಿತ್ತು.
Women’s Day/ ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಸದ್ಯ ಭಟ್ಕಳ (Bhatkal) ನಗರಸಭಾ ಪೌರಾಯುಕ್ತ (Bhatkal Municipal Commissioner) ಹುದ್ದೆಗೆ ಬೆಳಗಾವಿ (Belagavi) ಜಿಲ್ಲೆಯ ಕುಡಚಿ (Kudachi) ಪುರಸಭೆಯಲ್ಲಿ ೨ ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಾಬಾ ಸಾಹೇಬ್ ಮಾನೆ ಅವರು ಸರಕಾರದ ಆದೇಶದಂತೆ ವರ್ಗಾವಣೆಗೊಂಡು ಪೌರಾಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ವೆಂಕಟೇಶ ನಾವುಡ ಅವರು ನಗರಸಭೆ ಪೌರಾಯುಕ್ತ ಬಾಬಾ ಸಾಹೇಬ ಮಾನೆ ಅವರಿಗೆ ಅಧಿಕಾರ ಹಸ್ತಾಂತರಿಸಿ ಸ್ವಾಗತಿಸಿದರು.
PhD degree/ ಪಿಎಚ್‌ಡಿ ಪದವಿ ಸ್ವೀಕರಿಸಿದ ವಸಿಮ್ ಅಹ್ಮದ್ ಹಲ್ವೆಗರ್
“ಭಟ್ಕಳ ಡೈರಿ” ಜೊತೆಗೆ ಮಾತನಾಡಿದ ಅವರು ‘ನನ್ನ ಅಧಿಕಾರ ಅವಧಿಯಲ್ಲಿ ಸ್ವಚ್ಛತೆ, ಬೀದಿ ದೀಪ ವ್ಯವಸ್ಥೆ ಸೇರಿದಂತೆ ಕುಡಿಯುವ ನೀರಿನ ಸರಬರಾಜುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಸ್ವಚ್ಛತೆಯ ವಿಚಾರದಲ್ಲಿ ನಗರ ಭಾಗದ ಕಸಗಳ ವಿಂಗಡನೆಗೆ ಜನರು ಸಹ ಸಹಕಾರ ನೀಡಬೇಕಾಗಿದ್ದು, ಹಸಿ ಕಸ, ಒಣ ಕಸ ಹಾಗೂ ಅಪಾಯಕಾರಿ ಕಸಗಳನ್ನು ಸಮರ್ಪಕವಾಗಿ ವಿಂಗಡನೆ ಮಾಡಿ ಕಸ ಸಂಗ್ರಹಕ್ಕೆ ಬರುವವರಿಗೆ ನೀಡಬೇಕಾಗಿದೆ. ಇನ್ನು ನಗರ ಭಾಗದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ನೇರವಾಗಿ ತಂದಲ್ಲಿ ತಕ್ಷಣಕ್ಕೆ ಅದರ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಲಿದ್ದೇವೆ. ನಮ್ಮ ಅಧಿಕಾರದ ವ್ಯಾಪ್ತಿಯೊಳಗೆ ಜನರ ಕೆಲಸಗಳು ಸಮರ್ಪಕವಾಗಿ ಆಗುವಂತೆ ಜವಾಬ್ದಾರಿಯಿಂದ ಕೆಲಸ ಮಾಡಲಿದ್ದೇವೆ ಎಂದರು.



