ಹೊನ್ನಾವರ : ಅರ್ಮೇನಿಯಂ ದೇಶದಲ್ಲಿ ಜುಲೈ ೨೦ರಿಂದ ೨೭ರವರೆಗೆ ನಡೆದ ೨೩ ನೇ IPCA ವಿಶ್ವ ಮಟ್ಟದ ವೈಯುಕ್ತಿಕ ಚೆಸ್ ಚಾಂಪಿಯನ್ ಶಿಪ್ನಲ್ಲಿ ಹೊನ್ನಾವರದ ವಿಶೇಷ ಚೇತನ ಚೆಸ್ ಪಟು, ಕ್ಯಾಂಡಿಡೇಟ್ ಮಾಸ್ಟರ್ (CM) ಸಮರ್ಥ ಜಗದೀಶ ರಾವ್(Samarth Rao) ಬೆಳ್ಳಿ ಪದಕ ಗೆದ್ದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಹೊನ್ನಾವರದ ನಿವಾಸಿ, ಕ್ಯಾಂಡಿಡೇಟ್ ಮಾಸ್ಟರ್ ಸಮರ್ಥ ಜಗದೀಶ್ ರಾವ್(Samarth Rao) ೯ ಸುತ್ತಿನಲ್ಲಿ೬ ಪಂದ್ಯ ಗೆದ್ದು ವೀಲ್ ಚೆಯರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು, ನಮ್ಮ ದೇಶದ ಕೀರ್ತಿ ಪತಾಕೆಯನ್ನು ಅರ್ಮೇನಿಯದಲ್ಲಿ ಹಾರಿಸಿದ್ದಾರೆ. ಈ ಸ್ಪರ್ಧೆಯಲ್ಲಿ ತನಗಿಂತ ಬಲಶಾಲಿ ಆಟಗಾರರಾದ ೨೦೨೭ ರೇಟಿಂಗ್ ಇರುವ ಇಂಟರನ್ಯಾಶನಲ್ ಮಾಸ್ಟರ್ (IM) ಕ್ಯಾಂಪಸ್ ಇ.(Campos E.), ೨೦೩೪ ರೇಟಿಂಗ್ ಇರುವ ಫಿಡೆ ಮಾಸ್ಟರ್ (FM) ವೆಲಾಂಟಾ ವಿಟ್(Velanta Vit) ಮತ್ತು ೧೯೦೩ ರೇಟಿಂಗ್ ಇರುವ ಸಪಲಿನ್ ಸರ್ಜರಿ(Tsapalin Sergey) ಅವರೊಂದಿಗೆ ಸಮರ್ಥ ಜಯಗಳಿಸಿದರು. ಆ ಮೂಲಕ ತಮ್ಮ ರೇಟಿಂಗ್ ನಲ್ಲಿ ೩೮ ಅಂಕ ಹೆಚ್ಚಿಸಿ ಈಗಿನ ರೇಟಿಂಗ್ ೧೭೯೬ ರಿಂದ ೧೮೩೫ಕ್ಕೆ ಏರಿಸಿ ಕೊಂಡಿದ್ದಾರೆ. ಈ ಪಂದ್ಯಾವಳಿಯಲ್ಲಿ ೧೪ ದೇಶಗಳಿಂದ ೫೨ ಆಟಗಾರರು ಭಾಗವಹಿಸಿದ್ದರು.
ಇದನ್ನೂ ಓದಿ : ಬಿಜೆಪಿ ಪೋಸ್ಟ್ ನೋಡಿ ಸಚಿವ ಮಂಕಾಳ ವೈದ್ಯ ಗರಂ
ನಮ್ಮ ಭಾರತದಿಂದ ಐವರು ಆಟಗಾರರು ಭಾಗವಹಿಸಿದ್ದರು. ತಮಿಳುನಾಡಿನ ಶೆರೋನ್ ರಾಕೇಲ್ ಎ.ಬಿ. ಎಂಬುವವರು 9 ಸುತ್ತಿನಲ್ಲಿ ೨.೫ ಅಂಕ ಗಳಿಸಿ ಜೂನಿಯರ್ ಗರ್ಲ್ಸ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಇದನ್ನೂ ಓದಿ : ಮಾರಿ ಮೂರ್ತಿ ಬಿಂಬ ಪೂರ್ಣ
ಸಮರ್ಥ ರಾವ್ ಅವರು ಕೆನರಾ ಬ್ಯಾಂಕಿನ ನಿವೃತ್ತ ಉದ್ಯೋಗಿ ಜಗದೀಶ ರಾವ್ ಬಿ ಎಸ್. ಹಾಗೂ ಐ.ಟಿ.ಐ. ತರಬೇತಿ ಅಧಿಕಾರಿ ವಿನುತಾ ಭಟ್ ಅವರ ಹೆಮ್ಮೆಯ ಪುತ್ರ.