ಭಟ್ಕಳ (Bhatkal): ಚಲಿಸುತ್ತಿದ್ದ ರೈಲು (train) ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಮುರ್ಡೇಶ್ವರದ (Murudeshwar) ಹೈವೇ ಹೋಟೆಲ್ ಮುಂದೆ ಇರುವ ರೈಲ್ವೆ  (Railway) ಹಳಿ ಸಮೀಪ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತ ವ್ಯಕ್ತಿಯನ್ನು ಉಡುಪಿ (Udupi) ಜಿಲ್ಲೆಯ ಹೇರೂರಿನ ಸಂದೀಪ ಕೆ.ಆರ್. ರಾಮಚಂದ್ರ ಭಂಡಾರಿ (44) ಎಂದು ಗುರುತಿಸಲಾಗಿದೆ. ಇವರು ಯಾವುದೋ ಕಾರಣಕ್ಕೆ ಮುರ್ಡೇಶ್ವರ (Murdeshwar) ಆರ್.ಎನ್.ಎಸ್. (RNS) ಹೈವೇ ಹೋಟೆಲ್ ಮುಂದೆ ಇರುವ ರೈಲ್ವೆ ಹಳಿಯ ಹತ್ತಿರ ಮೈಸೂರಿನಿಂದ (Mysuru) ಮುರ್ಡೇಶ್ವರಕ್ಕೆ ಬರುವ ರೈಲಿಗೆ (train) ಅಡ್ಡ ಬಂದಿದ್ದರಿಂದ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಸಿಗಂದೂರು ಬಳಿ ದುರಂತ; ಈಶ್ವರ ಮಲ್ಪೆ ಕಾರ್ಯಾಚರಣೆ

ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಮುರುಡೇಶ್ವರ ರೈಲ್ವೆ ಸ್ಟೇಷನ್ ಮಾಸ್ಟರ್ ಉಮೇಶ ನಾಯ್ಕ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಬೆಳಗಾವಿಯಿಂದ ಸಾಗಿಸಲಾಗುತ್ತಿದ್ದ ಜಾನುವಾರು ರಕ್ಷಣೆ