ಭಟ್ಕಳ: ಯಕ್ಷಗಾನ (yakshagana) ಕಲೆ ಕೇವಲ ಮನರಂಜನೆಗಾಗಿ ಇರುವ ಕಲೆಯಲ್ಲ. ನಮ್ಮ ಸಂಸ್ಕೃತಿಯೊಂದಿಗೆ ನಮ್ಮ ಧರ್ಮದ ಸಂರಕ್ಷಣೆಯೂ ಯಕ್ಷಗಾನದಿಂದಾಗುತ್ತದೆ ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶ ಹಾಗೂ ನಾಮಧಾರಿ ಸಮಾಜದ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಅವರು ತಾಲೂಕಿನ ಕರಿಕಲ್ ಶ್ರೀರಾಮ ಧ್ಯಾನ ಮಂದಿರಲ್ಲಿ ಆಚರಿಸುತ್ತಿರುವ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭದಲ್ಲಿ ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕಾರುಣ್ಯ ಕಲಾ ಸಂಘದ ದಶಮಾನೋತ್ಸದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಹಾಗೂ ಯಕ್ಷಗಾನ (yakshagana) ಬಯಲಾಟದ ಉದ್ಘಾಟನಾ ಸಮಾರಂಭದಲ್ಲಿ ಯಕ್ಷಗಾನದ ಸಾಧಕರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.

ಇದನ್ನೂ ಓದಿ : ಬ್ರೆಜಿಲ್ ಯುವತಿ ವರಿಸಿದ ಮಂಗಳೂರಿನ ಯುವಕ

ಯಕ್ಷಗಾನವು ಸಾರ್ವಕಾಲಿಕವಾಗಿ ಜನಮನದಲ್ಲಿ ಉಳಿಯುವಂತಾಗಿದೆ. ಪೌರಾಣಿಕ ಪಾತ್ರಗಳ ಮೂಲಕ ಪ್ರತಿಯೊಬ್ಬರ ಮನಸ್ಸು ಕೂಡ ಆಕರ್ಶಿತವಾಗುತ್ತದೆ. ಮಠದ ವತಿಯಿಂದ ನಿರಂತರವಾಗಿ ಯಕ್ಷಗಾನಕ್ಕೆ ಪ್ರೋತ್ಸಾಹವನ್ನು ನೀಡುತ್ತಾ ಬರಲಾಗಿದೆ. ಪೌರಾಣಿಕ ಪಾತ್ರಗಳ ಮೂಲಕ ಆದರ್ಶಗಳನ್ನು ಜನತೆಗೆ ಮುಟ್ಟಿಸುವ ಕಾರ್ಯವನ್ನು ಯಕ್ಷಗಾನ ಮಾಡುತ್ತಿದೆ. ಪ್ರತಿ ದಿನವೂ ಸಾವಿರಾರು ಪ್ರೇಕ್ಷಕರು ಸೇರುತ್ತಿರುವುದೇ ಯಕ್ಷಗಾನಕ್ಕಿರುವ ಶಕ್ತಿ ಎಂದರು.

ಇದನ್ನೂ ಓದಿ : ಧರ್ಮನಿಷ್ಠೆಯಿಂದ ಯಮನನ್ನೂ ಗೆಲ್ಲಬಹುದು: ರಾಘವೇಶ್ವರಶ್ರೀ

ಮಾನವನ ಬದುಕಿಗೆ ಯಕ್ಷಗಾನ ಒಂದು ಉತ್ತಮ ವೇದಿಕೆಯಾಗಿದೆ. ಶ್ರೀರಾಮ ಕಾರುಣ್ಯ ಕಲಾ ಸಂಘಟನೆಯ ದಶಮಾನೋತ್ಸವದ ಅಂಗವಾಗಿ ಇಬ್ಬರು ಸಾಧಕರನ್ನು ಸಮ್ಮಾನಿಸಿರುವುದು ಉತ್ತಮ ಬೆಳವಣಿಗೆಯಲ್ಲದೆ ಯಕ್ಷಗಾನ ಬಯಲಾಟ ಮಾಡುತ್ತಿರುವುದು ಕೂಡ ಸಂತಸ ತಂದಿದೆ ಎಂದ ಶ್ರೀಗಳು, ಯಕ್ಷಗಾನ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುವಂತೆ ತಮ್ಮ ಶಿಷ್ಯವೃಂದಕ್ಕೆ ಕರೆ ನೀಡಿದರು.

ಇದನ್ನೂ ಓದಿ : ಸೈಬರ್ ಸುರಕ್ಷತೆ ಕುರಿತು ಕಾರ್ಯಗಾರ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಮಾನವನಿಗೆ ಜೀವನದಲ್ಲಿ
ಸಂಪಾದನೆಯೇ ಮುಖ್ಯವಲ್ಲ. ಆದರೆ ಜೀವನದಲ್ಲಿ ಪಡೆದ ಆಶೀರ್ವಾದವೂ ಮುಖ್ಯವಾಗುತ್ತದೆ. ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿವರ ಆಶೀರ್ವಾದ ಸದಾ ಯಕ್ಷಗಾನದ ಮೇಲಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯಕ್ಷಗಾನಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಯಕ್ಷಗಾನದಿಂದ ಜೀವನದಲ್ಲಿ ಸಂತಸವನ್ನು ಹೊಂದಲು ಸಾಧ್ಯ. ಕಳೆದ ೬೦ ವರ್ಷಗಳಿಂದ ಯಕ್ಷಗಾನಕ್ಕೆ ವೇಷ ಹಾಕಿದ್ದು ನನ್ನ ಸಾಧನೆ. ಯಕ್ಷಗಾನ ನಿರಂತರವಾಗಿ ನಡೆಯಬೇಕು ಎನ್ನುವುದು ತನ್ನ ಆಶಯವಾಗಿದೆ ಎಂದರು.

ಇದನ್ನೂ ಓದಿ : ಆಗಸ್ಟ್‌ ೧೦ರಂದು ಸೊರಬದಲ್ಲಿ ಅಡಿಕೆ ಧಾರಣೆ

ಕಾರ್ಯಕ್ರಮದಲ್ಲಿ ಕಲಾವಿದ ಜನಾರ್ದನ ಅಮ್ಮುಂಜೆ ಹಾಗೂ ಯಕ್ಷಗಾನ ಕಲಾವಿದ ಪಂಜ ಗುಡ್ಡೆಪ್ಪ ಸುವರ್ಣ ಅವರನ್ನು ಅವರ ಸಾಧನೆಗಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಾರ್ಧನ ಅಮ್ಮುಂಜೆ, ಪ್ರವೃತ್ತಿಯಾಗಿ ನಡೆಸಿಕೊಂಡು ಬಂದಿರುವ ತಮ್ಮ ಕಲಾ ಸೇವೆಗೆ ಪ್ರೋತ್ಸಾಹಿಸಿದವರನ್ನು ಸ್ಮರಿಸಿದರು.

ಇದನ್ನೂ ಓದಿ : ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ ಜೋಡಿ ಹಳಿ

ಕಾರ್ಯಕ್ರಮದ ವೇದಿಕೆಯಲ್ಲಿ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ದಂಪತಿ, ಸಂಚಾಲಕ ಕೃಷ್ಣ ಪ್ರಥ್ವಿ, ಸಿಂಡಿಕೆಟ್ ಬ್ಯಾಂಕಿನ ನಿವೃತ್ತ ಮುಖ್ಯ ವ್ಯವಸ್ಥಾಪಕ ಎಸ್.ಎಂ.ನಾಯ್ಕ, ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಕೋಡಿಕಲ್ ಉಪಸ್ಥಿತರಿದ್ದರು.
ಶ್ರೀರಾಮ ಕಾರುಣ್ಯ ಕಲಾ ಸಂಘದ ಜನಾರ್ದನ ಅಮ್ಮುಂಜೆ ನಿರ್ವಹಿಸಿದರು. ರಮೇಶ ಕುಲಶೇಖರ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಗುರುದಾಸ ಸುವರ್ಣ ಹಾಗೂ ಸತೀಶ ಸನ್ಮಾನ ಪತ್ರವನ್ನು ವಾಚಿಸಿದರು.

ಇದನ್ನೂ ಓದಿ : ಕಂದಮ್ಮಗಳನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿದ ತಾಯಿ

ಶ್ರೀರಾಮ ಕಾರುಣ್ಯ ಕಲಾ ಸಂಘ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಬ್ರಹ್ಮಕಪಾಲ ಪ್ರಸಂಗ ಪ್ರದರ್ಶನಗೊಂಡಿತು. ಸ್ಥಳೀಯ ಬಾಲ ಪ್ರತಿಭೆ ತ್ರಿಷಾ ಶಿವಕುಮಾರ ಅವಳ ತೆಂಕುತಿಟ್ಟಿನ ಭಾಗವತಿಕೆಯ ಮೂಲಕ ಯಕ್ಷಗಾನಕ್ಕೆ ಚಾಲನೆ ನೀಡಲಾಯಿತು. ಯಕ್ಷಗಾನ ಪ್ರದರ್ಶನ ನೆರೆದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.