ಭಟ್ಕಳ(Bhatkal): ಯೋಗವು(Yoga) ಶಾರೀರಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಕಾಪಡಿಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀಧರ ಶ್ಯಾನಭಾಗ ಹೇಳಿದರು. ಅವರು ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಏಳು ದಿನಗಳ ಯೋಗದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಚೇರಮನ್ ಡಾ. ಸುರೇಶ ನಾಯಕ ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಶಿಕ್ಷಕರಾಗುವ ನೀವು ಯೋಗವನ್ನು ಸರಿಯಾಗಿ ತಿಳಿದುಕೊಂಡರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು. ಯೋಗ (Yoga) ಗುರು ಗೋವಿಂದ ದೇವಾಡಿಗ ಯೋಗದ ಮಹತ್ವ ಹೇಳಿದರು.

ಇದನ್ನೂ ಓದಿ : ನಾರಾಯಣಗುರುಗಳ ಜಯಂತಿ ಆಚರಣೆ

ಪ್ರಾಂಶುಪಾಲ ಡಾ ವಿರೇಂದ್ರ ವಿ. ಶ್ಯಾನಭಾಗ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಹೇಮಂತ ದೇವಾಡಿಗ ಸ್ವಾಗತಿಸಿದರು. ಶ್ವೇತಾ ಮತ್ತು ನೂತನ ನಿರೂಪಿಸಿದರು. ಶ್ವೇತಾ ನಾಯ್ಕ ವಂದಿಸಿದರು. ಪಲ್ಲವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.

ವಿಡಿಯೋ ಸಹಿತ ಇದನ್ನೂ ಓದಿ : ಮುರುಡೇಶ್ವರನಿಗೆ ಲಕ್ಷ ಭಸ್ಮಾರ್ಚನೆ