ಕುಂದಾಪುರ: ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ರಾಯಲ್ ಸಭಾಭವನದ ಪಕ್ಕದ ಸ್ಯಾಬರ್ಮಕ್ಕಿಯ ಶ್ರೀ ನಾಗಬೊಬ್ಬರ್ಯ, ಹ್ಯಾಗುಳಿ ಹಾಗೂ ಪರಿವಾರ ದೇವರ ಒಂಭತ್ತನೇ ವರ್ಷದ ವಾರ್ಷಿಕ ವರ್ಧಂತ್ಯುತ್ಸವವು ಏಪ್ರಿಲ್ ೪ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಇದನ್ನೂ ಓದಿ : ಡಿಸಿ ಕಚೇರಿಗೆ ಬಂದ ಹಸು, ಪೂಜೆ ಸಲ್ಲಿಸಿ ಸ್ವಾಗತಿಸಿದ ಜಿಲ್ಲಾಧಿಕಾರಿ
ಏಪ್ರಿಲ್ ೪ರಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ದೇವರಿಗೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಪ್ರದಾನ ಹೋಮ, ಕಲಶ ಸ್ಥಾಪನೆ, ಶ್ರೀ ನಾಗ ದೇವರಿಗೆ, ಬೊಬ್ಬರ್ಯ ದೇವರಿಗೆ, ಹ್ಯಾಗುಳಿ ದೇವರಿಗೆ ಹಾಗೂ ಕೀಳು ದೇವರಿಗೆ ಕಲಶಾಭಿಷೇಕ ನಡೆಯಲಿದೆ. ಬೆಳಿಗ್ಗೆ ೧೧.೩೦ಕ್ಕೆ ನಾಗ ಪಾತ್ರಿಗಳಾದ ಶಂಕರನಾರಾಯಣ ಬಾಯರಿ- ಬೀಜಾಡಿ ಅವರಿಂದ ನಾಗ ದರ್ಶನ ಸೇವೆಯು ನಡೆಯಲಿರುವುದು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮಧ್ಯಾಹ್ನ ೧೨ಕ್ಕೆ ಪಲ್ಲ ಪೂಜೆ, ಮಹಾಪೂಜೆ, ಮಹಾ ಮಂಗಳಾರತಿ, ತೀರ್ಥ- ಪ್ರಸಾದ ವಿತರಣೆ ಇರಲಿದೆ. ಬಳಿಕ ಸೇವಾ ಕರ್ತರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿರುವುದು.
ಸಂಜೆ ಗಂಟೆ ೫ಕ್ಕೆ ಶ್ರೀ ಮೈಲಾರೇಶ್ವರ ಮಹಿಳಾ ಭಜನಾ ಮಂಡಳಿ ಮತ್ತು ಶ್ರೀ ಮಾಸ್ತಿಯಮ್ಮ ಭಜನಾ ಮಂಡಳಿ, ಮದ್ದುಗುಡ್ಡೆ, ಕುಂದಾಪುರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೭.೩೦ ಕ್ಕೆ ಸೇವಾ ಕರ್ತರಿಂದ ವಿಶೇಷ ರಂಗಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ೯ಕ್ಕೆ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಇವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ-ಪಾವಂಜೆ ಇವರಿಂದ ಸಂಪೂರ್ಣ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನ ಗೊಳ್ಳಲಿದೆ.