ಕುಮಟಾ: ರೆಕ್ಕೆಯೊಂದು ಕತ್ತರಿಸಲ್ಪಟ್ಟ ಕಡಲಾಮೆಯೊಂದು ಇಲ್ಲಿನ ಬಾಡ-ಗುಡೇಅಂಗಡಿ ಕಡಲ ತಡಿಯಲ್ಲಿ ರವಿವಾರ ಕಂಡು ಬಂದಿದೆ. ಕಡಲಾಮೆಗೆ ಚಿಕಿತ್ಸೆ ಕೊಡಿಸಲು ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಕುಮಟಾಕ್ಕೆ ತೆಗೆದುಕೊಂಡು ಬಂದಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಮೀನುಗಾರಿಕೆ ನಡೆಸುವ ದೋಣಿಯ ಯಂತ್ರದ ಫ್ಯಾನಿಗೆ ಸಿಲುಕಿ ಈ ಕಡಲಾಮೆಯ ಒಂದು ರೆಕ್ಕೆ ಕತ್ತರಿಸಲ್ಪಟ್ಟಿರಬಹುದು ಎಂದು ಊಹಿಸಲಾಗಿದೆ. ಎರಡು ರೆಕ್ಕೆಯ ಸಹಾಯದಿಂದ ಆಮೆಗಳು ನೀರಿನಲ್ಲಿ ವೇಗದಲ್ಲಿ ಒಡಾಡುತ್ತಿರುತ್ತವೆ. ಆದರೆ ಆಕಸ್ಮಿಕ ಅಪಘಾತದಲ್ಲಿ ಒಂದು ರೆಕ್ಕೆ ಕತ್ತರಿಸಲ್ಪಟ್ಟ ಈ ಕಡಲಾಮೆ ಸರಾಗವಾಗಿ ಒಡಾಡಲಾರದೆ ಬಾಡ-ಗುಡೇಅಂಗಡಿಯ ಕಡಲ ತಡಿಯಲ್ಲಿ ತೇಲಿ ಬಂದಿರುವುದನ್ನು ಬೆಳಿಗ್ಗೆ ವ್ಯಕ್ತಿಯೋರ್ವರು ಗಮನಿಸಿದ್ದಾರೆ. ಈ ಕಡಲಾಮೆಯನ್ನು ಮತ್ತೆ ಸಮುದ್ರದ ತೆಕ್ಕೆಗೆ ಸೇರಿಸಲು ಯತ್ನಿಸಿ ವಿಫಲರಾದ ನಂತರ ಅವರು ಸ್ಥಳೀಯ ಅರಣ್ಯ ಇಲಾಖೆಗೆ ಈ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಗಾಯಗೊಂಡ ಕಡಲಾಮೆಗೆ  ಚಿಕಿತ್ಸೆ ಕೊಡಿಸಲು ಕುಮಟಾಕ್ಕೆ ತೆಗೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ :‌ ಮುರ್ಡೇಶ್ವರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಡೆದ ವರ್ಧಂತಿ ಉತ್ಸವ