ಕುಂದಾಪುರ : ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಲಾವೃತಗೊಂಡಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕರಾವಳಿಯಲ್ಲಿ ನಿರಂತರ ಎಡಬಿಡೆದೆ ಮಳೆ ಸುರಿಯುತ್ತಿದೆ. ಪರಿಣಾಮ ನದಿಗಳು ಉಕ್ಕಿ ಹರಿಯುತ್ತಿವೆ. ಕುಂದಾಪುರ ತಾಲೂಕಿನಲ್ಲಿರುವ ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿ ನೀರು ನುಗ್ಗಿದೆ. ಇಂದು ಬೆಳಗ್ಗೆ ಒಂದೂವರೆ ಗಂಟೆ ಸುಮಾರಿಗೆ ದೇವಿಗೆ ನೈಸರ್ಗಿಕ ಪುಣ್ಯಸ್ನಾನವಾಗಿದೆ ಎಂದು ಭಕ್ತರು ಉದ್ಘರಿಸಿದ್ದಾರೆ.
ಇದನ್ನೂ ಓದಿ : ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕೊನೆಯುಸಿರು
ಕಮಲಶಿಲೆಯು ಉಡುಪಿ ಜಿಲ್ಲೆಯ ಕುಂದಾಪುರದಿಂದ ಕೇವಲ ೩೫ ಕಿ.ಮೀ. ದೂರದಲ್ಲಿದೆ. ಇದು ಎತ್ತರದ ಪರ್ವತಗಳು ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿದೆ. ಅದರ ಬದಿಗಳಲ್ಲಿ ಹರಿಯುವ ಕುಬ್ಜಾ ನದಿಯು ಕಮಲಶಿಲೆಯ ಸುಂದರವಾದ ನೋಟದ ಆಕರ್ಷಣೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ : ಗೋರೆ ಗುಡ್ಡದ ಗೋಪಾಲಕೃಷ್ಣ ದೇಗುಲ ಕಳ್ಳತನ ಆರೋಪಿಗಳಿಬ್ಬರ ಬಂಧನ
ಕಮಲಶಿಲೆಯ ಅತ್ಯಂತ ಪ್ರಸಿದ್ಧವಾದ ಆಕರ್ಷಣೆಯೆಂದರೆ ಪುರಾತನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ. ಈ ದೇವಾಲಯವು ಹಳ್ಳಿಯ ಮಧ್ಯಭಾಗದಲ್ಲಿದೆ. ಸಾಮಾನ್ಯವಾಗಿ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಿದರೆ ಇಲ್ಲಿ ಶ್ರೀ ಬ್ರಾಹ್ಮಿ ದುರ್ಗಾ ದೇವಿಯನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಲಿಂಗವು ಮಹಾಕಾಳಿ ಮತ್ತು ಮಹಾಲಕ್ಷ್ಮಿ ದೇವಿಯ ಎರಡು ಶಾಶ್ವತ ಶಕ್ತಿಗಳ ಸಂಯೋಜನೆಯೆಂದು ಹೇಳಲಾಗುತ್ತದೆ.