ಭಟ್ಕಳ : ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರಿಬ್ಬರೂ ಗಾಯಗೊಂಡ ಘಟನೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನಗರದ ಹಳೇ ಸಿಟಿಲೈಟ್ ಹೋಟೆಲ್ ಹತ್ತಿರ ಈ ಅಪಘಾತ ನಡೆದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳದಿಂದ ಶಿರಾಲಿ ಕಡೆಗೆ ಹೊರಟಿದ್ದ ಯಮಹಾ ಬೈಕಿಗೆ ಹಳೆಯ ಸಿಟಿಲೈಟ್ ಹೋಟೆಲ್ ಕ್ರಾಸಿನಿಂದ ರಾಷ್ಟ್ರೀಯ ಹೆದ್ದಾರಿಗೆ ಬಂದ ಟಿವಿಎಸ್ ಜುಪಿಟರ್ ಸ್ಕೂಟರ್ ಡಿಕ್ಕಿಹೊಡೆದಿದೆ.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗುಡ್ಡ ಕುಸಿತ, ಸಂಚಾರಕ್ಕೆ ಅಡಚಣೆ
ಶಿರಾಲಿಯಲ್ಲಿ ಮೊಬೈಲ್ ಅಂಗಡಿ ಹೊಂದಿರುವ ವೆಂಕಟಾಪುರದ ಲಕ್ಷ್ಮೀಶ ಈರಪ್ಪ ನಾಯ್ಕ(೨೬) ಯಮಹಾ ಬೈಕ್ ಚಲಾಯಿಸುತ್ತಿದ್ದರು. ಟಿವಿಎಸ್ ಸ್ಕೂಟರ್ ಸವಾರ ಬುಡೇನಸಾಬ್ ಅಲಿಸಾಬ್ ಪಿಂಜಾರ ವಿರುದ್ದ ಲಕ್ಷ್ಮೀಶ ದೂರು ನೀಡಿದ್ದಾರೆ. ಹಳೇ ಸಿಟಿ ಲೈಟ್ ಹೊಟೇಲ್ ಕ್ರಾಸದಿಂದ ಭಟ್ಕಳಕ್ಕೆ ಬರಲು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಬರಹೋಗುವ ವಾಹನಗಳನ್ನು ನೋಡಿಯೂ ನಿಷ್ಕಾಳಜಿತನದಿಂದ ಸ್ಕೂಟರ್ ಅಪಘಾತಕ್ಕೆ ಕಾರಣರಾಗಿದ್ದಾರೆ ಎಂದು ದೂರಲಾಗಿದೆ. ಘಟನೆಯಲ್ಲಿ ಬೈಕ್ ಸವಾರನ ಎಡಭುಜ, ಕಾಲು ಮತ್ತು ಕೈಗೆ ಗಾಯಗಳಾಗಿವೆ. ಸ್ಕೂಟರ್ ಸವಾರನ ತಲೆ, ಮೂಗು ಮತ್ತು ಹೊಟ್ಟೆಯ ಭಾಗಕ್ಕೆ ಗಾಯಗಳಾಗಿವೆ.
ಇದನ್ನೂ ಓದಿ : ಭಟ್ಕಳ ತಾಲೂಕಿನಾದ್ಯಂತ ಎರಡ್ಮೂರು ದಿನಗಳಿಂದ ವರುಣಾರ್ಭಟ
ಜುಲೈ ೪ರಂದು ಮಧ್ಯಾಹ್ನ ೧.೩೦ರ ಸುಮಾರಿಗೆ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಜುಲೈ ೬ರ ಸಂಜೆ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟನೆ