ಕುಮಟಾ: ಇಲ್ಲಿನ ಬಗ್ಗೋಣ ರಸ್ತೆಯಲ್ಲಿನ ನಾಮಧಾರಿ ಸಭಾಭವನದ ಆವಾರದಲ್ಲಿರುವ ಶ್ರೀ ವೆಂಕಟರಮಣ, ಶ್ರೀದೇವಿ ಮತ್ತು ಭೂದೇವಿ ದೇವಸ್ಥಾನದಲ್ಲಿ ಮೇ ೧೧ರಿಂದ ೧೩ರವರೆಗೆ ವರ್ಧಂತಿ ಉತ್ಸವ ಸಹಿತ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ದೇವಸ್ಥಾನದಲ್ಲಿ ಮೇ ೧೧, ಶನಿವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ ೧೨, ಭಾನುವಾರ ಮಧ್ಯಾಹ್ನದಂದು ಜೀರ್ಣಾಷ್ಠಬಂಧ, ತತ್ವ ಕಲಾ ಹವನ, ಸಂಜೆ ಕಲ್ಯಾಣೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮೇ ೧೩, ಸೋಮವಾರದಂದು ಬ್ರಹ್ಮಕಲಾಶಾಭಿಷೇಕ, ಶ್ರೀ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ, ವೆಂಕಟರಮಣ ಮೂಲ ಮಂತ್ರ ಹವನ, ಸತ್ಯನಾರಾಯಣ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸೋಮವಾರ ಮಧ್ಯಾಹ್ನ ೧೧.೩೦ಕ್ಕೆ ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ.
ಇದನ್ನೂ ಓದಿ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಮಟಾ ತಾಲೂಕಿಗೆ ಶೇ.೯೩.೦೭ ಫಲಿತಾಂಶ
ಮೂರು ದಿನಗಳ ಕಾಲ ನಡೆಯುವ ವರ್ಧಂತಿ ಉತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು, ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕುಮಟಾ ನಾಮಧಾರಿ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೋರಿದ್ದಾರೆ.