ಭಟ್ಕಳ: ತಾಲೂಕಿನ ಎಡಭದ್ರು ಕ್ರಾಸಿನ ಬಳಿ ಬೈಕಿಗೆ ಟಿಪ್ಪರ್ ಗುದ್ದಿದ ಕಾರಣ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದಾರೆ (Biker died). ಹೊನ್ನಾವರ (Honnavar) ತಾಲೂಕಿನ ಮಂಕಿ ಅನಂತವಾಡಿಯ ದಿನೇಶ ರಾಮಚಂದ್ರ ನಾಯ್ಕ (೩೫) ಟಿಪ್ಪರ್ ಓಡಿಸುತ್ತಿದ್ದು, ಮೀನುಗಾರಿಕೆ ನಡೆಸಿಕೊಂಡು ಜೀವನ ನಡೆಸುತ್ತಿದ್ದ ಭಟ್ಕಳ (Bhatkal) ತಾಲೂಕಿನ ತೂದಳ್ಳಿ ಹಿರೆದೋಮಿ ನಿವಾಸಿ ನಾಗರಾಜ ಸುಕ್ರಾ ಹರಿಕಾಂತ (೨೧) ಅಪಘಾತದಲ್ಲಿ ಸಾವನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ (National Highway) ೬೬ರ ಹೊನ್ನಾವರ – ಭಟ್ಕಳ ರಸ್ತೆಯಲ್ಲಿ ಅವರು ಬೈಕ್ ಓಡಿಸುವಾಗ ಟಿಪ್ಪರ್ ಗುದ್ದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾ ೧೭ರ ಬೆಳಿಗ್ಗೆ ೯ ಗಂಟೆಗೆ ಹೊನ್ನಾವರ ಕಡೆಯಿಂದ ಮುರ್ಡೇಶ್ವರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯ ಅವಘಡಕ್ಕೆ ಕಾರಣ ಎಂದು ದೂರಲಾಗಿದೆ. ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ನಾಗರಾಜ ಅವರ ಕೆಟಿಎಂ ಬೈಕ್ಗೆ ಟಿಪ್ಪರ್ ಹಿಂಭಾಗದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ನಾಗರಾಜ ಅವರು ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದು ತಲೆಗೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದಾರೆ.
Hindu Sammelan/ ಯಲ್ವಡಿಕವೂರನಲ್ಲಿ ಅದ್ದೂರಿ ಹಿಂದು ಸಮ್ಮೇಳನ
ತಕ್ಷಣ ಅವರನ್ನು ಮಣಿಪಾಲದ (Manipal) ಕಸ್ತೂರಬಾ ಆಸ್ಪತ್ರೆಗೆ (KMC) ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಈ ಸಂಬಂಧ ಹಿರೆದೋಮಿಯ ಹೇಮಂತ ನಾರಾಯಣ ಹರಿಕಾಂತ ಅವರು ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಟಿಪ್ಪರ್ ಚಾಲಕ ದಿನೇಶ ರಾಮಚಂದ್ರ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



