ಭಟ್ಕಳ: ಇಲ್ಲಿನ ಬಂದರಿನಲ್ಲಿರುವ ಖಾರ್ವಿ ಸಮಾಜದ (Kharvi community) ಹೋಳಿ ಹಬ್ಬಕ್ಕೆ (Holi festival) ತನ್ನದೇ ಆದ ವಿಶಿಷ್ಟತೆ ಇದೆ. ಈ ಸಮುದಾಯದ ಹೋಳಿಯಾಟವನ್ನು ನೋಡಲು ಪ್ರತಿವರ್ಷವೂ ಜನರು ಗುಂಪು ಗುಂಪಾಗಿ ಸೇರಿಕೊಳ್ಳುವುದು ವಿಶೇಷವಾಗಿದ್ದು, ಹಬ್ಬವು ಸಂಭ್ರಮ ಮತ್ತು ಸಂಪ್ರದಾಯದ ಸಮನ್ವಯವಾಗಿ ಆಚರಿಸಲ್ಪಡುತ್ತದೆ.

ಈ ಹೋಳಿ ಆಚರಣೆಯ ವಿಡಿಯೋವನ್ನು  ಯೂಟ್ಯೂಬ್ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಂ ನಲ್ಲಿ ವೀಕ್ಷಿಸಬಹುದು.

ಖಾರ್ವಿ ಸಮುದಾಯವು ಹೋಳಿ ಹಬ್ಬವನ್ನು (Holi festival) ವಿಶೇಷ ರೀತಿಯಲ್ಲಿ ಆಚರಿಸುವ ಪರಂಪರೆ ಹೊಂದಿದೆ. ಪ್ರತಿ ವರ್ಷ ಸಮಾಜದ ಒಂದು ಕುಟುಂಬವು ಹರಕೆ ಹೊರುತ್ತದೆ. ಹರಕೆಯ ನಿಯಮದಂತೆ ಮೊದಲ ದಿನ ಆ ಕುಟುಂಬದ ಮನೆಯಿಂದ ಅಡಕೆ ಮರವನ್ನು ಸಮಾಜದ ಸದಸ್ಯರೆಲ್ಲರೂ ಸೇರಿ ತಂದುಕೊಳ್ಳುತ್ತಾರೆ. ವಾದ್ಯಗಳ ಸದ್ದಿಗೆ ಕುಣಿತ ಹಾಕುತ್ತಾ ಅಡಕೆ ಮರವನ್ನು ಮೆರವಣಿಗೆಯ ಮೂಲಕ ಕಡಲತೀರಕ್ಕೆ (beach) ತರಲಾಗುತ್ತದೆ.

Holi festival/ ಭಟ್ಕಳದಲ್ಲಿ ಸಂಭ್ರಮದ ಹೋಳಿ ಹಬ್ಬ

ಈ ವರ್ಷವೂ ಮೆರವಣಿಗೆಯ ವೇಳೆ ಜೈಕಾರಗಳ ಘೋಷಣೆ ಗಾಳಿಯಲ್ಲಿ ಮೊಳಗುತ್ತಿದ್ದು, ವೇಷಧಾರಿಗಳ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಮಹಿಳೆಯರು ಮತ್ತು ಪುರುಷರು ಎಂಬ ಭೇದವಿಲ್ಲದೆ ಎಲ್ಲರೂ ನೃತ್ಯದಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮ ಹಂಚಿಕೊಂಡರು.

Konkani folk/ ಕೊಂಕಣ ಖಾರ್ವಿ ಜಾನಪದ ಉತ್ಸವ ‘ಸಿಗ್ಮೆ ಪೊರೊಬ್’ ಚಾಲನೆ

ಎರಡನೇ ದಿನದ ಆಚರಣೆ ಮತ್ತಷ್ಟು ಕಳೆಗಟ್ಟಿತ್ತು. ಡಿಜೆ ಸದ್ದಿನ ನಡುವೆ ವಿವಿಧ ಸ್ತಬ್ಧಚಿತ್ರಗಳೊಂದಿಗೆ ಯುವಕ-ಯುವತಿಯರು ಡಿಜೆ ಸಂಗೀತಕ್ಕೆ ತಕ್ಕಂತೆ ಕುಣಿಯುತ್ತಾ ಪರಸ್ಪರ ಬಣ್ಣ ಎರಚಿಕೊಳ್ಳುತ್ತ ತಲಗೋಡ ಕಡಲತೀರವನ್ನು ತಲುಪಿದರು. ಈ ವೇಳೆ ಮೊದಲೇ ಒಟ್ಟುಗೂಡಿಸಿಕೊಂಡಿದ್ದ ತೆಂಗಿನ ಗರಿಗಳನ್ನು ಜೋಡಿಸಿ ಸಮಾಜದ ಹಿರಿಯರು ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಕಾಮದಹನ ವಿಧಿ ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಈ ವಿಶಿಷ್ಟ ಆಚರಣೆಯನ್ನು ಕಣ್ತುಂಬಿಕೊಂಡು ಪುಳಕಿತರಾದರು. ನಂತರ ಹಲವರು ಸಮುದ್ರದಲ್ಲಿ ಪುಣ್ಯ ಸ್ನಾನ ಮಾಡಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

Fuel shortage/ ಇಂಧನ ವ್ಯತ್ಯಯ ಭೀತಿ: ಭಟ್ಕಳದ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲು