ಭಟ್ಕಳ ಡೈರಿ ವರದಿ

ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಗ್ರಾಹಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಭಟ್ಕಳ ತಾಲೂಕಿನ ಮಾವಿನಕುರ್ವಾದ ಅಂಗಡಿ ವ್ಯಾಪಾರಿಯೊಬ್ಬರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾವಿನಕುರ್ವಾ ಗ್ರಾಮದ ವೆಂಕಟೇಶ್ವರ ಸ್ಟೋರ್ ಎದುರು ನವೆಂಬರ್ ೭ರಂದು ಬೆಳಿಗ್ಗೆ ೧೧.೨೬ರ ವೇಳೆಗೆ ಈ ಘಟನೆ ನಡೆದಿದೆ.

ದುರ್ಗಪ್ಪ ಕುಪ್ಪಯ್ಯ ನಾಯ್ಕ (೫೨) ಎಂಬವರು ಯಾವುದೇ ಅಧಿಕೃತ ಪರವಾನಿಗೆ ಪಡೆಯದೆ ಅಂಗಡಿಗೆ ಬಂದ ಗ್ರಾಹಕರಿಗೆ ಸಾರ್ವಜನಿಕ ಸ್ಥಳದಲ್ಲೇ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಆರೋಪಿ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ ೧೫(ಎ) ಮತ್ತು ೩೨(೩)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಉತ್ತರ ಕನ್ನಡದ ಎಲ್ಲಾ ತಾಲೂಕುಗಳಿಗೂ ಕಬಡ್ಡಿ ಮ್ಯಾಟ್: ಸಂಸದ ಕಾಗೇರಿ ಭರವಸೆ

ಭಟ್ಕಳದ ವಾರದ ಚಿತ್ರಣ: ಅಭಿವೃದ್ಧಿಯ ನಿರೀಕ್ಷೆ, ಸಮಸ್ಯೆಗಳ ಸರಮಾಲೆ, ಪ್ರತಿಭೆಗಳ ಸಾಧನೆ!