ಭಟ್ಕಳ ಡೈರಿ ವರದಿ
ಭಟ್ಕಳ: ನಗರದ ಹಳೆ ಬಸ್ ನಿಲ್ದಾಣದ ಸಮೀಪದ ಮೀನು ಮಾರುಕಟ್ಟೆಯಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಅವಾಚ್ಯವಾಗಿ ನಿಂದಿಸಿಕೊಂಡು ಹೊಡೆದಾಡಿಕೊಂಡ ಘಟನೆ ಅ. ೭ರಂದು ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಇಬ್ಬರೂ ಸಣ್ಣಪುಟ್ಟ ಗಾಯಗೊಂಡಿದ್ದು, ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳನ್ನು ಭಟ್ಕಳದ ಗಾಂಧಿನಗರ ಕೋಕ್ತಿಯ ನಿವಾಸಿ, ಮೀನು ವ್ಯಾಪಾರಿ ಮೊಹಮ್ಮದ್ ಅರ್ಸಲಾನ್ ಹೈದರ್ (೩೬) ಹಾಗೂ ಉಸ್ಮಾನ ನಗರದ ನಿವಾಸಿ ಶೇಖ್ ಮೊಹಮ್ಮದ್ ಶರೀಕ್ (೨೫) ಎಂದು ಗುರುತಿಸಲಾಗಿದೆ.
ಅ. ೭ರಂದು ಮಧ್ಯಾಹ್ನ ಸುಮಾರು ೧೨.೫೦ರ ವೇಳೆಗೆ ಹಳೆ ಬಸ್ ನಿಲ್ದಾಣದ ಸಮೀಪದ ಮೀನು ಮಾರುಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಪರಸ್ಪರ ಅವಾಚ್ಯವಾಗಿ ಬೈದಾಡಿಕೊಂಡು ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಲ್ಲಿ ಇಬ್ಬರೂ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ–೨೦೨೩ರ ಕಲಂ ೧೯೪(೨)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನವೀನ ಎಸ್. ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:
ಮುರಿನಕಟ್ಟೆ ಪ್ರಕರಣದ ಆರೋಪಪಟ್ಟಿಗೆ ಬಿಜೆಪಿ ಆಕ್ಷೇಪ; ೧೭ ಕಾರ್ಯಕರ್ತರಿಗೆ ಕಾನೂನು ನೆರವಿನ ಭರವಸೆ
ಭಟ್ಕಳ: ಎಕ್ಕೆಗೋಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅ.೧೧ರಿಂದ ಶರನ್ನವರಾತ್ರಿ ಮಹೋತ್ಸವ




