ಭಟ್ಕಳ: ದಿವಂಗತ ನಟ ಪುನೀತ್ ರಾಜ್‌ಕುಮಾರ್ (Puneeth Rajkumar)ಅವರ ೫೧ನೇ ಜನ್ಮದಿನದ ಅಂಗವಾಗಿ ಭಟ್ಕಳದ (Bhatkal) ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ ವತಿಯಿಂದ ಪಟ್ಟಣದ ಟ್ಯಾಕ್ಸಿ ನಿಲ್ದಾಣದಲ್ಲಿ ಉಚಿತ ಅನ್ನದಾನ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಕಾರ್ಯಕ್ರಮದ ವಿಡಿಯೋವನ್ನು ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಳಿಗ್ಗೆಯಿಂದ ನಡೆದ ರಕ್ತದಾನ ಶಿಬಿರದಲ್ಲಿ ೫೦ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಬಳಿಕ ಸ್ನೇಹ ವಿಶೇಷ ಶಾಲೆಯ ವಿಶೇಷ ಚೇತನ ಮಕ್ಕಳಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು. ಈ ವೇಳೆ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಭಟ್ಕಳದ ನೂರಾರು ಸಾರ್ವಜನಿಕರಿಗೆ ಅನ್ನದಾನ ವಿತರಿಸಲಾಯಿತು.
Biker died/ ಮುರುಡೇಶ್ವರದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಅಪ್ಪು ಅಭಿಮಾನಿ ತಿಮ್ಮಯ್ಯ ನಾಯ್ಕ ಮಾತನಾಡಿ, ಪುನೀತ್ ಅವರು ಜೀವಂತವಾಗಿದ್ದಾಗ ಅನಾಥರು ಹಾಗೂ ನಿರ್ಗತಿಕರಿಗೆ ಆಶ್ರಯವಾಗಿದ್ದರು. ಅವರ ಆದರ್ಶವನ್ನು ಅನುಸರಿಸಿ ಜನತೆಗೆ ಒಂದು ಹೊತ್ತಿನ ಊಟ ನೀಡುವ ಮೂಲಕ ಸೇವೆ ಸಲ್ಲಿಸಿದ್ದೇವೆ. ಮುಂದಿನ ಪೀಳಿಗೆಯೂ ಈ ಕಾರ್ಯವನ್ನು ಮುಂದುವರಿಸಬೇಕು ಎಂಬುದು ನಮ್ಮ ಆಶಯ ಎಂದರು.
Hindu Sammelan/ ಯಲ್ವಡಿಕವೂರನಲ್ಲಿ ಅದ್ದೂರಿ ಹಿಂದು ಸಮ್ಮೇಳನ
ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲೀಯಾನ್ ಮಾತನಾಡಿ, ಸಾವಿನ ಬಳಿಕವೂ ಒಬ್ಬ ವ್ಯಕ್ತಿಯ ಹುಟ್ಟುಹಬ್ಬವನ್ನು ಜನರು ಆಚರಿಸುತ್ತಿದ್ದಾರೆ ಎಂದರೆ ಅವರ ಸಾಧನೆಯ ಮಹತ್ವ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಪುನೀತ್ ಅವರು ತಮ್ಮ ದುಡಿಮೆಯ ಹಣದಲ್ಲಿ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ. ಸಮಾಜಕ್ಕೆ ಹಾನಿಕಾರಕ ಜಾಹೀರಾತುಗಳಿಂದ ದೂರವಿದ್ದು, ನಂದಿನಿ ಹಾಲಿನಂತಹ ಉತ್ತಮ ಉತ್ಪನ್ನಗಳ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.
Hit and run/ ಮುರ್ಡೇಶ್ವರದಲ್ಲಿ ಹಿಟ್ ಎಂಡ್ ರನ್
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಸಂಘಟಕರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕುಮಟಾ ರಕ್ತ ಕೇಂದ್ರದ ಡಾ ನಾರಾಯಣ ಮುಡ್ಲಿಗಿರಿ, ಜೈ ಮಾರುತಿ ರಕ್ತದಾನಿ ಬಳಗದ ಗಣೇಶ ದೇವಡಿಗ, ಸ್ನೇಹ ವಿಶೇಷ ಶಾಲೆಯ ಸಂಸ್ಥಾಪಕಿ ಮಾಲತಿ ಉದ್ಯಾವರ ಹಾಗೂ ಶಾಲಾ ಮಕ್ಕಳು, ಅಪ್ಪು ಅಭಿಮಾನಿಗಳಾದ ಸೂರ್ಯಕಾಂತ ನಾಯ್ಕ (ಬಾಬಣ್ಣ), ಗಣಪತಿ ನಾಯ್ಕ, ರೇವಂತ ನಾಯ್ಕ, ಸೀತಾರಾಮ ನಾಯ್ಕ, ಪಾಂಡು ನಾಯ್ಕ, ಅಭಿಷೇಕ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
labourer/ ಕೂಲಿ ಕೆಲಸಕ್ಕೆ ಹೋದವ ಶವವಾಗಿ ಪತ್ತೆ



