ಭಟ್ಕಳ: ನಗರದ ಸೋನಾರಕೇರಿಯ ನೇತಾಜಿ ಸ್ಪೋಟ್ಸ್ ಕ್ಲಬ್ ಹಿರಿಯ ಸದಸ್ಯರಾಗಿದ್ದ ಸಚಿನ್ ಮಹಾಲೆ ಸ್ಮರಣಾರ್ಥ ಮಾ ೨೧ ಮತ್ತು ೨೨ರಂದು ನಗರದ ಹನುಮಾನ್ ನಗರದಲ್ಲಿ `ಸಚಿನ್ ಮೆಮೋರಿಯಲ್ ಟ್ರೋಫಿ-೨೦೨೬’ ಕ್ರಿಕೆಟ್ ಪಂದ್ಯಾವಳಿ (cricket tournament) ಆಯೋಜಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸೋನಾರಕೇರಿಯ ನೇತಾಜಿ ಸ್ಪೋಟ್ಸ್ ಕ್ಲಬ್ ತಮ್ಮ ತಂಡದ ಹಿರಿಯ ಸದಸ್ಯರಾಗಿದ್ದ ಸಚಿನ್ ಮಹಾಲೆ ಸ್ಮರಣೆಯಲ್ಲಿ ಈ ಕ್ರಿಕೆಟ್ ಪಂದ್ಯಾವಳಿ (Cricket Tournament) ಆಯೋಜಿಸಿದ್ದು, ಐಪಿಎಲ್ ಮಾದರಿಯಲ್ಲಿ ನಡೆಯಲಿದೆ. ಸೋನಾರಕೇರಿ ಮತ್ತು ಆಸರಕೇರಿಯ ಒಟ್ಟು ಆರು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಅತಿಥೇಯ ನೇತಾಜಿ ಸ್ಪೋರ್ಟ್ ಈಗಾಗಲೇ ಆಟಗಾರರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸೋನಾರಕೇರಿಯ ಶ್ರೀ ಮಹಾಗಣಪತಿ ಶ್ರೀ ಮಂಡಲೇಶ್ವರ ದೇವಸ್ಥಾನದ ಆವರಣದಲ್ಲಿ ಆಟಗಾರರ ಆಯ್ಕೆಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ.
Sri Rama Kshetra/ ಉಜಿರೆಯ ಶ್ರೀರಾಮ ಕ್ಷೇತ್ರದಲ್ಲಿ ಮಾ ೨೦ರಂದು ಜಾತ್ರೋತ್ಸವಕ್ಕೆ ಚಾಲನೆ
ಮಾ ೧೯ರಂದು ಸಂಜೆ ೬.೩೦ಕ್ಕೆ ಆಟಗಾರರ ಜೆರ್ಸಿ (ಸಮವಸ್ತ್ರ) ಮತ್ತು ಟ್ರೋಫಿಗಳ ಅನಾವಣ ಕಾರ್ಯಕ್ರಮ ಸೋನಾರಕೇರಿಯ ವಿರೂಪಾಕ್ಷ ಕಲಾ ಮಿತ್ರ ಮಂಡಳಿಯ ವೇದಿಕೆಯಲ್ಲಿ ನಡೆಯಲಿದೆ. ಭಾಗವಹಿಸುವ ಆರು ತಂಡಗಳ ಮಾಲಕರು, ನಾಯಕು, ಐಕಾನ್ ಆಟಗಾರರು ಸಹಿತ ಇತರ ಆಟಗಾರರು, ಸಚಿನ್ ಮಹಾಲೆಯವರ ಅಭಿಮಾನಿಗಳು, ಊರ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.



