ಭಟ್ಕಳ: ಉಜಿರೆಯ (Ujire) ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ (Sri Rama Kshetra) ೬೬ನೇ ವರ್ಷದ ಶ್ರೀರಾಮ ನಾಮ ಸಪ್ತಾಹ, ಪ್ರತಿಷ್ಠಾ ಜಾತ್ರಾ ಮಹೋತ್ಸವ ಹಾಗೂ ಮಹಾ ಬ್ರಹ್ಮರಥೋತ್ಸವವು ಮಾರ್ಚ್ ೨೦ರಿಂದ ೨೭ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಭಟ್ಕಳ ವಿಭಾಗೀಯ ಅಧ್ಯಕ್ಷ ಶ್ರೀಧರ ನಾಯ್ಕ ತಿಳಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಗರದ ಆಸರಕೇರಿ ತಿರುಮಲ ವೆಂಕಟರಮಣ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಹಾಮಂಡಲೇಶ್ವರ ೧೦೦೮ ಶ್ರೀ ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಉಜಿರೆಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ (Sri Rama Kshetra) ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ ೨೦ರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀರಾಮ ತಾರಕ ಮಂತ್ರ ಸಪ್ತಾಹ ಹಾಗೂ ಜಾತ್ರೋತ್ಸವಕ್ಕೆ ಚಾಲನೆ ಸಿಗಲಿದೆ ಎಂದರು.
Puneeth Rajkumar/ ಭಟ್ಕಳದಲ್ಲಿ ಪುನೀತ್ ರಾಜಕುಮಾರ ಜನ್ಮದಿನಾಚರಣೆ
ಮಾರ್ಚ್ ೨೧ರಂದು ಶ್ರೀ ನಿತ್ಯಾನಂದ ಸ್ವಾಮೀಜಿ ನಾರಾಯಣ ಗುರು ಹಾಗೂ ಶಿರಡಿ ಸಾಯಿ ಬಾಬಾ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಮಾ ೨೨ರಿಂದ ಮಾ ೨೫ರವರೆಗೆ ಶ್ರೀರಾಮ ದೇವರ ರಜತ ಪಲ್ಲಕ್ಕಿ ಉತ್ಸವ, ಅನ್ನಪೂರ್ಣೇಶ್ವರಿ ದೇವಿ ಪುಷ್ಪ ರಥೋತ್ಸವ, ದುರ್ಗಾಪರಮೇಶ್ವರಿ ಚಂದ್ರಮಂಡಲ ರಥೋತ್ಸವ ಹಾಗೂ ಗೋಪಾಲಕೃಷ್ಣ ದೇವರ ಬೆಳ್ಳಿ ರಥೋತ್ಸವ, ಮಾ ೨೬ರಂದು ಹನುಮಾನ್ ರಥೋತ್ಸವ, ಮಾ ೨೭ರಂದು ಶ್ರೀರಾಮ ತಾರಕ ಮಂತ್ರ ಯಜ್ಞಮಂಗಲೋತ್ಸವ, ದೈವಗಳ ನೇಮೋತ್ಸವ ಹಾಗೂ ರಾತ್ರಿ ೧೦ ಗಂಟೆಗೆ ಮಹಾ ಬ್ರಹ್ಮರಥೋತ್ಸವ ನಡೆಯಲಿದೆ.
Biker died/ ಮುರುಡೇಶ್ವರದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಸುದ್ದಿಗೋಷ್ಠಿಯಲ್ಲಿ ಭಟ್ಕಳ ನಾಮದಾರಿ (Namadhari) ಅಭಿವೃದ್ದಿ ಟ್ರಸ್ಟ ಅಧ್ಯಕ್ಷ ಅರುಣ ನಾಯ್ಕ, ಶಿರಾಲಿ ಶಾರದಹೊಳೆ ನಾಮಧಾರಿ ಸಮಾಜದ ಅಧ್ಯಕ್ಷ ನಾಗೇಂದ್ರ ನಾಯ್ಕ, ಸಮಿತಿಯ ಹಿರಿಯ ಸುಬ್ರಾಯ ನಾಯ್ಕ, ಭಟ್ಕಳ ನಾಮಧಾರಿ ಸಮಾಜದ ಗೌರವಾಧ್ಯಕ್ಷ ಕ್ರಷ್ಣ ನಾಯ್ಕಆಸರಕೇರಿ, ಉಪಾಧ್ಯಕ್ಷ ಎಂ ಕೆ ನಾಯ್ಕ, ಶ್ರೀ ರಾಮಕ್ಷೇತ್ರದ ಟ್ರಸ್ಟಿ ಕೆ ಆರ್ ನಾಯ್ಕ, ಕಾರ್ಯದರ್ಶಿ ಡಿ ಎಲ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.



