ಭಟ್ಕಳ: ರಾಷ್ಟ್ರೀಯ ಹೆದ್ದಾರಿ (National Highway) ದಾಟುತ್ತಿದ್ದ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದು (car collision) ಬೈಕಿನಲ್ಲಿದ್ದ ತಂದೆ-ಮಗ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಬೆಳಕೆ ಹಡೀನ್ ಗ್ರಾಮದ ಕೃಷಿಕ ನಾರಾಯಣ ತಂದೆ ಮಳ್ಳಾ ನಾಯ್ಕ (೬೫) ಮತ್ತವರ ಮಗ ವಿನಾಯಕ ನಾಯ್ಕ ಗಾಯಗೊಂಡವರು. ಕಾರು ಚಾಲಕ ಶಿರಸಿ (Sirsi) ತಾಲೂಕಿನ ಬೆಳಗೆ ಗ್ರಾಮದ ಮನೋಹರ ಕೃಷ್ಣ ನಾಯ್ಕ (೨೬) ವಿರುದ್ಧ ದೂರು ದಾಖಲಾಗಿದೆ. ಮಾ ೧೬ರಂದು ರಾತ್ರಿ ೮.೩೦ರ ಸುಮಾರಿಗೆ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-೬೬ರ ಗೋಳಿಮರ ಕ್ರಾಸನಲ್ಲಿ ಅಪಘಾತ ನಡೆದಿದೆ.
Cricket Tournament/ ಮಾ ೨೧, ೨೨ರಂದು ಸಚಿನ್ ಮಹಾಲೆ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ
ಮಂಗಳೂರು (Mangaluru) ಕಡೆಯಿಂದ ಭಟ್ಕಳದ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದ ಕಾರು ಭಟ್ಕಳ ಕಡೆಯಿಂದ ಗೋಳಿಮರ ಕ್ರಾಸ್ ಕಡೆಗೆ ಹೋಗಲು ಹೆದ್ದಾರಿ ದಾಟುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ (car collision). ಬೈಕ್ ಚಲಾಯಿಸುತ್ತಿದ್ದ ನಾರಾಯಣ ನಾಯ್ಕ ಅವರ ಹಣೆಗೆ ಮತ್ತು ಕಾಲಿಗೆ ಗಾಯಗಳಾಗಿದ್ದರೆ, ಹಿಂಬದಿ ಸವಾರರಾಗಿದ್ದ ಅವರ ಮಗ ವಿನಾಯಕ ಅವರಿಗೆ ಎಡ ಕಾಲಿಗೆ ಪೆಟ್ಟಾಗಿದೆ ಎಂದು ಬೈಕ್ ಸವಾರ ನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ.
Sri Rama Kshetra/ ಉಜಿರೆಯ ಶ್ರೀರಾಮ ಕ್ಷೇತ್ರದಲ್ಲಿ ಮಾ ೨೦ರಂದು ಜಾತ್ರೋತ್ಸವಕ್ಕೆ ಚಾಲನೆ



