ಮುಂಡಗೋಡ: ೧೦ ವರ್ಷಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ನುಡಿದಂತೆ ನಡೆದಿದ್ದಾರೆಂದು ಅನಿಸಿದರೆ ಬೆಂಬಲಿಸಿ. ನುಡಿದಂತೆ ನಡೆದಿಲ್ಲವೆಂದಾದರೆ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ- 2 ಸಮಾವೇಶದಲ್ಲಿ ಮಾತನಾಡಿದ ಅವರು, ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ಮೋದಿ ಮೋದಿ ಎಂದು ಜೈಕಾರ ಹಾಕಿದ ಯುವಕರಿಗೆ ಅವರು ತಿರುಪತಿ ತಿಮ್ಮಪ್ಪನ ನಾಮ ಹಾಕಿದರು. ನರೇಂದ್ರ ಮೋದಿ ಸುಳ್ಳಿನ ಸರದಾರ, ಬಿಜೆಪಿ ಸುಳ್ಳು ಉತ್ಪಾದನಾ ಕೇಂದ್ರ; ಸುಳ್ಳೇ ಅವರ ಮನೆ ದೇವ್ರು ಎಂದು ಟೀಕಿಸಿದರು.
ಇದನ್ನೂ ಓದಿ : ನೀರು ಪೋಲು ಆಗುತ್ತಿದ್ದರೂ ಪುರಸಭೆ ಮೌನ
ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೊಸ ಕಾರ್ಖಾನೆ ಸ್ಥಾಪಿಸದೆ, ಬಂಡವಾಳ ಹೂಡಿಕೆಗೆ ಅವಕಾಶವನ್ನೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಟ್ಟಿಲ್ಲ. ಮೋದಿ ಬಹಳ ಸೊಗಸಾಗಿ ಮಾತನಾಡುತ್ತಾರೆ. ಇವತ್ತಿನವರೆಗೆ ಸುಳ್ಳುಗಳನ್ನೇ ಹೇಳಿ ಅವರು ಜನರನ್ನ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಜನರ ಭಾವನೆಗಳನ್ನ ಕೆರಳಿಸುತ್ತಿದ್ದಾರೆ. ಜಾತಿ- ಧರ್ಮದ ಹೆಸರಿನಲ್ಲಿ ದ್ವೇಷ ಹರಿಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಇದನ್ನ ಜನತೆ ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಹೇಳುವ ಇಂಥವರನ್ನ ಮತ್ತೆ ನಂಬುತ್ತೀರಾ? ದಯಮಾಡಿ ನಂಬಬೇಡಿ. ಅವರು ದೇಶಕ್ಕೆ ಮಾಡಿದ ದೊಡ್ಡ ಮೋಸ ಸುಳ್ಳು ಎಂದರು.
ಇದನ್ನೂ ಓದಿ : ಉತ್ತರ ಕನ್ನಡ ಕ್ಷೇತ್ರದಲ್ಲಿ ೧೦ ವರ್ಷದಿಂದ ಅಭಿವೃದ್ಧಿ ಕಾಣೆ : ಮಂಕಾಳ ವೈದ್ಯ
ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆಂದವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದರು. ಬಡವರು ಹಸಿವಿನಿಂದ ಮಲಗಬಾರದು, ಕರ್ನಾಟಕ ಹಸಿವು ಮುಕ್ತ ಮಾಡಬೇಕೆಂದು ಅನ್ನಭಾಗ್ಯದಲ್ಲಿ ಅಕ್ಕಿ ಕೊಟ್ಟೆ. ಬಿಜೆಪಿ ಸರ್ಕಾರ ಬಂದಾಗ ಯಡಿಯೂರಪ್ಪ ಅದರಲ್ಲಿ ೨ ಕೆಜಿ ಇಳಿಸಿದರು. ಅಧಿಕಾರಕ್ಕೆ ಬಂದ ತಕ್ಷಣವೇ ಕ್ಯಾಬಿನೆಟ್ನಲ್ಲಿ ಡಿಸೈಡ್ ಮಾಡಿ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದೆವು. ಆದರೆ ಆಗಲೂ ಅನ್ನಭಾಗ್ಯಕ್ಕೆ ಅಕ್ಕಿ ಕೊಡದೆ ಜನರಿಗೆ ದ್ರೋಹ ಮಾಡಿದರು ಎಂದರು.
ಇದನ್ನೂ ಓದಿ : ಅಭಿವೃದ್ದಿಯ ದೃಷ್ಟಿಯಲ್ಲಿ ಈ ಬಾರಿಯ ಚುನಾವಣೆ : ಐವನ್ ಡಿಸೋಜಾ