ಭಟ್ಕಳ: ಲೋಕ ಕಲ್ಯಾಣಕ್ಕಾಗಿ ಚಾತುರ್ಮಾಸ್ಯ ಕಾರ್ಯಕ್ರಮ ಮಾಡಲಾಗುವುದು ಎಂದು ಧರ್ಮಸ್ತಳದ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಅವರು ಭಟ್ಕಳದ ಕರಿಕಲ್ ಧ್ಯಾನ ಮಂದಿರದಲ್ಲಿ ಜುಲೈ ೨೧ರಿಂದ ಆರಂಭವಾಗುವ ಚಾತುರ್ಮಾಸ್ಯದ ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈ ಕಾರ್ಯಕ್ರಮ ನನ್ನ ಧಾರ್ಮಿಕ ಕಾರ್ಯಕ್ರಮವಲ್ಲ. ಇದು ಲೋಕ ಕಲ್ಯಾಣಕ್ಕಾಗಿ ಮಾಡುವ ಕಾರ್ಯಕ್ರಮವಾಗಿದೆ. ತಾವೆಲ್ಲರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನ  ಕೃಪೆಗೆ ಪಾತ್ರರಾಗಿ ಅ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವಾಗಲಿ ಎಂದರು.

ಇದನ್ನೂ ಓದಿ : ತೆಂಗಿನಮರ ಬಿದ್ದು ಆಟೋ ರಿಕ್ಷಾ ಜಖಂ, ಮನೆಗೆ ಹಾನಿ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾರದಹೊಳೆ ಹಳೇಕೋಟಿ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್. ಕೆ. ನಾಯ್ಕ,  ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ,ಮಾಜಿ ಶಾಸಕ ಸುನೀಲ ನಾಯ್ಕ,  ಕುಮಟಾದ ಯುವ ಮುಖಂಡ ಸೂರಜ ನಾಯ್ಕ ಸೋನಿ, ಹೊನ್ನಾವರದ ಪಿ.ಟಿ. ನಾಯ್ಕ, ವಾಮನ ನಾಯ್ಕ, ಕುಮಟಾದ ಆರ್.ಜಿ.ನಾಯ್ಕ, ಈಶ್ವರ ನಾಯ್ಕ ಮುರುಡೇಶ್ವರ, ಗೋವಿಂದ ನಾಯ್ಕ ಭಟ್ಕಳ, ಶಿವಾನಂದ ನಾಯ್ಕ, ಕೃಷ್ಣ ನಾಯ್ಕ ಸಾರದಹೊಳೆ, ಮತ್ತಿತರ ನಾಮಧಾರಿ ಸಮಾಜದ ಮುಖಂಡರು ಮಾತನಾಡಿದರು. ಜಿಲ್ಲೆಯಲ್ಲಿ ನಮ್ಮ ಸಮಾಜದ  ಗುರುಗಳ ಚಾತುರ್ಮಾಸ್ಯವು  ಪ್ರಥಮ ಬಾರಿಗೆ ನಡೆಯುತ್ತಿದೆ. ಅದರಲ್ಲೂ  ಭಟ್ಕಳದಲ್ಲಿ ಈ ಚಾತುರ್ಮಾಸ್ಯ ಕಾರ್ಯಕ್ರಮ ನಡೆಯುತ್ತಿರುವುದು  ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯ. ಈ ಕಾರ್ಯಕ್ರಮವನ್ನು ಸಮಾಜದ ಬಂಧುಗಳು ಎಲ್ಲರೂ ಪಕ್ಷ ಭೇದ ಮರೆತು  ಸೌಹಾರ್ದತೆಯಿಂದ ಅದ್ದೂರಿಯಾಗಿ ಆಚರಿಸಬೇಕಾಗಿದೆ ಎಂದು ಒಕ್ಕೊರಲಿನಿಂದ ಹೇಳಿದರು.

ಇದನ್ನೂ ಓದಿ : ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು

ಈ ಸಂದರ್ಭದಲ್ಲಿ  ನಾಮಧಾರಿ ಸಮಾಜದ  ಪ್ರತಿಯೊಬ್ಬ ಭಕ್ತರು ಪಾಲ್ಗೊಂಡು ಯಶಸ್ಸು ಗೊಳಿಸಲು ನಾವೆಲ್ಲರೂ ಪ್ರಯತ್ನಿಸಬೇಕು. ಜಿಲ್ಲೆಯ ಪ್ರತಿ ನಾಮಧಾರಿ ಸಮಾಜದ ಮನೆಯಿಂದ ಮಾತೆಯರು, ಮಕ್ಕಳು, ಕುಟುಂಬದವರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿದೆ ಎಂದು ಮುಖಂಡರು ಹೇಳಿದರು.

ಇದನ್ನೂ ಓದಿ : ಮೇಲಿನ ಖರ್ವಾದಲ್ಲಿ ‘ತಸಮಾತೀರ’; ಸುಶೀಲಾ ಚಿಟ್ಟಾಣಿಗೆ‌ ಸಮ್ಮಾನ

ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಪ್ರಮುಖರಾದ ಸತೀಶ ನಾಯ್ಕ, ಶ್ರೀಕಾಂತ ನಾಯ್ಕ ಮತ್ತಿತರರು ಮಾತನಾಡಿ, ಕಾರ್ಯಕ್ರಮ ಯಶಸ್ಸುಗೊಳಿಸಲು ವಿವಿಧ ಸಮಿತಿಗಳ ಸಭೆ ನಡೆಸಿ ತಯಾರಿ ನಡೆಸಿದ್ದೇವೆ. ಸ್ವಾಮೀಜಿಗಳ ಚಾತುರ್ಮಾಸ್ಯ ಕಾರ್ಯಕ್ರಮ ಇಡೀ ಜಿಲ್ಲೆಯಲ್ಲಿ  ಧಾರ್ಮಿಕ ಸಂಚಲನ ಮೂಡಿಸುವಂತೆ  ನಾವೆಲ್ಲರೂ  ನಮಗೆ ಕೊಟ್ಟ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗೋಣ ಎಂದರು.

ಇದನ್ನೂ ಓದಿ : ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

ಕಾರ್ಯಕ್ರಮದಲ್ಲಿ ಪ್ರಮುಖರಾದ ಗೋಪಾಲ ನಾಯ್ಕ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ ಶಿರಾಲಿ, ಬಿ.ಜೆ.ಪಿ. ಮಂಡಲ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಯ್ಕ, ಗೋವಿಂದ ನಾಯ್ಕ ಮಂಕಿ, ಪುಷ್ಪಾ ನಾಯ್ಕ, ಭಾಸ್ಕರ ನಾಯ್ಕ ಮುರುಡೇಶ್ವರ, ಪಚ್ಚು ನಾಯ್ಕ ಕುಮಟಾ, ಆರ್.ಎಚ್.ನಾಯ್ಕ ಕುಮಟಾ, ವಿಠ್ಠಲ ನಾಯ್ಕ ಭಟ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

ಪ್ರಾರಂಭದಲ್ಲಿ ಚಾತುರ್ಮಾಸ್ಯ  ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಭಟ್ಕಳ ಹಾಗೂ ಸಾರದಹೊಳೆ ಕೂಟದವರು ಒಗ್ಗಟ್ಟಾಗಿ ಈ ಕಾರ್ಯಕ್ರಮವನ್ನು  ಅಚ್ಚುಕಟ್ಟಾಗಿ ನೆರವೇರಿಸಲು ವಿವಿಧ ಸಮಿತಿಗಳ ಸಭೆ ಕರೆದು ಜವಾಬ್ದಾರಿ ವಹಿಸಲಾಗಿದೆ. ಸಮಾಜದ ಪ್ರತಿಯೊಂದು ಮನೆಗೂ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು  ನಿರ್ವಹಿಸಬೇಕಾಗಿದೆ ಎಂದರು.

ಇದನ್ನೂ ಓದಿ : ಲೋಕ ಅದಾಲತ್ ಯಶಸ್ವಿ; ೧೧೧೯ ಪ್ರಕರಣ ಇತ್ಯರ್ಥ

ಶ್ರೀರಾಮಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಸ್ವಾಗತಿಸಿದರು. ಭಟ್ಕಳ ಗುರುಮಠದ ಕಾರ್ಯದರ್ಶಿ ಡಿ.ಎಲ್.ನಾಯ್ಕ ವಂದನಾರ್ಪಣೆ ಮಾಡಿದರು.