ಭಟ್ಕಳ : ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಎರಡನೇ ವಲಯದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಟ್ಕಳ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಂಪ್ಯೂಟರ್ ಅಪ್ಲಿಕೇಷನ್ (ಎಐಎಂಸಿಎ) ಉತ್ತಮ ಪ್ರದರ್ಶನ ನೀಡಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

೧೫ ಓವರುಗಳ ಅಂತಿಮ ಪಂದ್ಯದಲ್ಲಿ ಭಟ್ಕಳ ಎಐಎಂಸಿಎ ತಂಡವು ಹುಬ್ಬಳ್ಳಿಯ ಜಿಜೆ ವಾಣಿಜ್ಯ ಕಾಲೇಜು ತಂಡವನ್ನು ಎದುರಿಸಿತು. ಮರ್ವಾನ್ ಅವರ ವೇಗದ ೬೦ ರನ್‌ಗಳ ನೆರವಿನಿಂದ ಭಟ್ಕಳ ೧೪೪ ರನ್ ಗಳಿಸಿದರು. ಆದರೆ, ಗುರಿ ಬೆನ್ನತ್ತಿದ ಹುಬ್ಬಳ್ಳಿಯ ಜಿಜೆ ಕಾಮರ್ಸ್ ಕಾಲೇಜು ಮೂರು ವಿಕೆಟ್ ನಷ್ಟಕ್ಕೆ ೧೪೫ ರನ್ ಗಳಿಸಿ ವಿಜಯಿಯಾಯಿತು.

ಇದನ್ನೂ ಓದಿ : ಮಾಜಿ ಸಚಿವ ರಮಾನಾಥ ರೈ ಭಟ್ಕಳದಲ್ಲಿ ಸುದ್ದಿಗೋಷ್ಠಿ

ಆರಂಭದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿಯ ಆಕ್ಸ್‌ಫರ್ಡ್ ಕಾಲೇಜು ತಂಡವನ್ನು ೧೧೦ ರನ್‌ಗಳಿಂದ ಭಟ್ಕಳದ ಎಐಎಂಸಿಎ ತಂಡ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಎಐಎಂಸಿಎ ೨೦ ಓವರ್‌ಗಳಲ್ಲಿ ೨೫೦ ರನ್‌ಗಳ ಅಸಾಧಾರಣ ಮೊತ್ತವನ್ನು ದಾಖಲಿಸಿದರು. ಮರ್ವಾನ್ ಫಕಿ ಅಹ್ಮದ ಕೇವಲ ೬೭ ಎಸೆತಗಳಲ್ಲಿ ಆರು ಸಿಕ್ಸರ್ ಮತ್ತು ೧೫ ಬೌಂಡರಿ ಸೇರಿದಂತೆ ಅಜೇಯ ೧೪೧ ರನ್ ಗಳಿಸಿದರು. ಜೀಶನ್ ಮುಖ್ತಾಸರ್ ತಂಡದ ಮೊತ್ತಕ್ಕೆ ೫೦ ರನ್ ಕೊಡುಗೆ ನೀಡಿದರು. ನಂತರ ಆಕ್ಸ್‌ಫರ್ಡ್ ಕಾಲೇಜು ೧೪೦ ರನ್‌ಗಳಿಗೆ ಆಲೌಟ್ ಆಯಿತು. ಬೌಲಿಂಗ್ ನಲ್ಲಿ ಅಬ್ಬರಿಸಿದ ಭಟ್ಕಳ ಅಂಜುಮನ್ ತಂಡದ ನಾಯಕ ಖುರ್ರಂ ಗವಾಯಿ ಮೂರು ಓವರ್ ಗಳಲ್ಲಿ ೨೩ ರನ್ ನೀಡಿ ಮೂರು ವಿಕೆಟ್ ಕಬಳಿಸಿ ಭರ್ಜರಿ ಜಯಕ್ಕೆ ಕಾರಣರಾದರು.

ಇದನ್ನೂ ಓದಿ : ಜೆಡಿಎಸ್ ತೊರೆದು ‘ಕೈ’ ಹಿಡಿದ‌ ಶಾಬಂದ್ರಿ

ಇದಾದ ನಂತರ ಸೆಮಿಫೈನಲ್‌ನಲ್ಲಿ, ಭಟ್ಕಳದ ಎಐಎಂಸಿಎ ಕಾಲೇಜು ಹುಬ್ಬಳ್ಳಿಯ ಗ್ಲೋಬಲ್ ಕಾಲೇಜು ವಿರುದ್ಧ ತನ್ನ ಪ್ರಾಬಲ್ಯ ಮುಂದುವರೆಸಿತು, ಮೊದಲು ಬ್ಯಾಟಿಂಗ್ ಮಾಡಿ ೨೩೪ ರನ್ ಗಳಿಸಿತು. ೫೨ ಎಸೆತಗಳಲ್ಲಿ ೧೮ ಬೌಂಡರಿ ಹಾಗೂ ೧ ಸಿಕ್ಸರ್ ಸೇರಿದಂತೆ ೧೦೪ ರನ್ ಗಳಿಸಿದ ಮರ್ವಾನ್ ಫಕಿ ಅಹ್ಮದ್ ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ಮಿಂಚಿದರು. ಎಐಎಂಸಿಎ ತಂಡದ ಬೌಲರ್ ಫೈಜ್ ಖಾಜಿ ಹುಬ್ಬಳ್ಳಿಯ ಗ್ಲೋಬಲ್ ಕಾಲೇಜನ್ನು ೧೨೪ ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಲ್ಕು ಓವರ್‌ಗಳಲ್ಲಿ ಐದು ವಿಕೆಟ್ ಪಡೆದರು.

ಮರ್ವಾನ್ ಫಕಿ ಅಹ್ಮದ್ ಬೆಸ್ಟ್ ಬ್ಯಾಟ್ಸ್‌ಮನ್:
ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಮರ್ವಾನ್ ಫಕಿ ಅಹ್ಮದ ಅವರನ್ನು ಪಂದ್ಯಾವಳಿಯ ಅತ್ಯುತ್ತಮ ದಾಂಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಕ್ವಾರ್ಟರ್-ಫೈನಲ್ ಮತ್ತು ಸೆಮಿ-ಫೈನಲ್ ಎರಡರಲ್ಲೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

ಎಐಎಂಸಿಎ ತಂಡದ ಸದಸ್ಯರು :
ಖುರ್ರಂ ಗವಾಯಿ ನೇತೃತ್ವದ ಭಟ್ಕಳ ಎಐಎಂಸಿಎ ತಂಡದಲ್ಲಿ ಮರ್ವಾನ್ ಫಕಿ ಅಹ್ಮದ, ಮೊಹಮ್ಮದ್ ಫಾಹಿಮಾನ್, ಉಯಿನಾ ಸಿದ್ದಿಬಾಪ, ಜೀಶಾನ್ ಮುಖ್ತಾಸರ್, ಫೈಜ್ ಖಾಜಿ, ಸಲಾ ಹಾಜಿಕ, ಸಮೀದ್ ಅಹ್ಮದ್, ಮೊಹಮ್ಮದ್ ಸೂಫಿಯಾನ್, ಇಸ್ಮಾಯಿಲ್ ಸಿದ್ದಿಕ್ವಾ, ಮೊಹಮ್ಮದ್ ಸ್ವಾಂಝಾ, ಮಝೇನ್ ಔಫ್ , ಮತ್ತು ಜಮಾನ್ ಜಬಾಲಿ ಇದ್ದರು. ತಂಡದ ತರಬೇತುದಾರರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಮೋಹನ ಮೇಸ್ತ ತಂಡದ ಭಾಗವಾಗಿದ್ದರು.

ಅಂಜುಮನ್ ಹಾಮೀ ಎ ಮುಸ್ಲಿಮೀನ್ ಭಟ್ಕಳದ ಅಧ್ಯಕ್ಷ ಮೊಹಮ್ಮದ್ ಯೂನಸ್ ಖಾಜಿಯಾ, ಪ್ರಧಾನ ಕಾರ್ಯದರ್ಶಿ ಇಶಾಕ್ ಶಾಬಂದ್ರಿ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅಫ್ತಾಬ್ ಕಮ್ರಿ, ಎಐಎಂಸಿಎ ಪ್ರಾಂಶುಪಾಲ ಮೊಹಮ್ಮದ್ ಮೊಹ್ಸಿನ್ ಸೇರಿದಂತೆ ಅಂಜುಮನ್‌ನ ಇತರ ಅಧಿಕಾರಿಗಳು ಮತ್ತು ಕಾರ್ಯಕಾರಿ ಸದಸ್ಯರು ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತಂಡಗಳು :
ಈ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಅಂಜುಮನ್ ಕಾಲೇಜು ಭಟ್ಕಳ, ಆಕ್ಸ್‌ಫರ್ಡ್ ಕಾಲೇಜು ಹುಬ್ಬಳ್ಳಿ, ಅಂಜುಮನ್ ಪದವಿ ಕಾಲೇಜು ಭಟ್ಕಳ, ಗುರು ಸುಧೀಂದ್ರ ಕಾಲೇಜು ಭಟ್ಕಳ, ಗ್ಲೋಬಲ್ ಕಾಲೇಜು ಹುಬ್ಬಳ್ಳಿ, ಜೆಜಿ ಕಾಲೇಜು ಹುಬ್ಬಳ್ಳಿ, ನೆಹರು ಕಾಲೇಜು ಹುಬ್ಬಳ್ಳಿ ಮತ್ತು ಎಸ್‌ಕೆ ಕಲಾ ಕಾಲೇಜು ಹುಬ್ಬಳ್ಳಿ ಸೇರಿದಂತೆ ಎಂಟು ತಂಡಗಳು ಭಾಗವಹಿಸಿದ್ದವು.

ಇದನ್ಮೂ ಓದಿ : ನೀರು ಪೋಲು ಆಗುತ್ತಿದ್ದರೂ ಪುರಸಭೆ ಮೌನ