ಉಡುಪಿ: ಇತ್ತೀಚೆಗಷ್ಟೇ ನಡೆದ ಅಡಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಶಂಕರನಾರಾಯಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ :  ಆಕಳ ಕರುವನ್ನು ರಕ್ಷಿಸಿದ ಹಿಂದೂ ಕಾರ್ಯಕರ್ತರು

ಬಂಧಿತ ವ್ಯಕ್ತಿಗಳನ್ನು ಕುಂದಾಪುರದ ಗುಲ್ವಾಡಿ ಮೂಲದ ಅಮೀರ್ ಜೈನುದ್ದೀನ್ (23), ಭಟ್ಕಳದ ಉಸ್ಮಾನ್ ನಗರ ನಿವಾಸಿ ನಿಸಾರ್ ಆಸಿಫ್ ಅಣ್ಣಾರ್(೨೪) ಮತ್ತು ಭಟ್ಕಳದ ಬಿಳಾಲಖಂಡ ನಿವಾಸಿ ಮುನಾವರ್(೨೧) ಎಂದು ಗುರುತಿಸಲಾಗಿದೆ.
ಆರೋಪಿಗಳು ಶಂಕರ್ ನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೇಕ ಅಡಕೆ ವ್ಯಾಪಾರದ ಅಂಗಡಿಗಳಿಗೆ ಕನ್ನ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇವರು ಹಾಲಾಡಿ ಮತ್ತು ಕೊದ್ರ ಬೈಲೂರು ಪರಿಸರ, ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಡ್ಕಲ್ ಮತ್ತು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನೋಜಾಡಿ ಮುಂತಾದ ಪ್ರದೇಶಗಳಲ್ಲಿ ಕಳ್ಳತನ ಮಾಡಿದ್ದಾರೆಂದು ಆರೋಪಿಸಲಾಗಿದೆ.

ನಿರಂತರ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ವೆಬ್ಸೈಟ್ ಪೇಜ್ ಫಾಲೋವ್ ಮಾಡಿ. ಇಲ್ಲಿ ಒತ್ತಿಇಲ್ಲಿ ಒತ್ತಿ.

ಪೊಲೀಸರು ಆರೋಪಿತರಿಂದ ೧೧.೬೫ ಕ್ವಿಂಟಾಲ್ ಅಡಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಳ್ಳತನಕ್ಕೆ ಬಳಸಿದ ಪಿಕಪ್ ವ್ಯಾನ್ ಮತ್ತು ಸ್ಕೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ೪.೦೫ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬಂಧನದ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.