ಭಟ್ಕಳ: ಅನಾರೋಗ್ಯದಿಂದ ಸಾವನ್ನಪ್ಪಿದ ಭಿಕ್ಷುಕಿಯೋರ್ವಳ ಮೃತ ದೇಹವನ್ನು ಸಾಮಾಜ ಸೇವಕ ಮಂಜು ಮುಟ್ಟಳ್ಳಿ ಇಲ್ಲಿನ ಬಂದರ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಹಾವೇರಿ ಜಿಲ್ಲೆ ಮೂಲದ ಮಾದವೇಮ್ಮ ಶಂಕರನಾಗ
ಜುಮ್ಮನವರ ಮೃತ ಭಿಕ್ಷುಕಿ. ಈಕೆ ಮುರುಡೇಶ್ವರ ಸುತ್ತಮುತ್ತಲಿನಲ್ಲಿ ಭಿಕ್ಷಾಟನೆ ಮಾಡಿಕೊಂಡು ಮುರ್ಡೇಶ್ವರ ನಾಕಾದ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದಳು. ಕಳೆದ 3-4 ತಿಂಗಳ ಹಿಂದೆ
ಅನಾರೋಗ್ಯದಿಂದ ಬಳಲುತ್ತಿದ್ದವಳ ಆರೋಗ್ಯದಲ್ಲಿ ವ್ಯತ್ಯಾಸಗೊಂಡ ಹಿನ್ನೆಲೆ ಕೂಗಾಡಲು ಪ್ರಾರಂಭಿಸಿದ್ದಳು. ಆಕೆಯನ್ನು ಅಲ್ಲಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ವಿಷಯ ತಿಳಿದ ಸಮಾಜ ಸೇವಕ ಮಂಜು ಮುಟ್ಟಳ್ಳಿ ಮೃತ ದೇಹವನ್ನು ಇಲ್ಲಿನ ಬಂದರ ರಸ್ತೆಯಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇವರಿಗೆ ಪದ್ಮಯ ದೇವಾಡಿಗ ಹಾಗೂ ಲೈಫ್ ಕೇರ್ ಆಂಬುಲೆನ್ಸ್ ಚಾಲಕ ಎವರೆಸ್ಟ್ ಲೋಬೋ ಸಾಥ್ ನೀಡಿದರು.
ಕಳೆದ 7 ರಿಂದ 8 ತಿಂಗಳ ಹಿಂದಷ್ಟೇ ಈಕೆಯ ಮಗ ಕೂಡ ಅತಿಯಾದ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದ. ಆತನ ಮೃತ ದೇಹವನ್ನು ಕೂಡ ಸಮಾಜ ಸೇವಕ ಮಂಜು ಮುಟ್ಟಳ್ಳಿ ಮೃತ ಮಾದವೇಮ್ಮ ಸಮ್ಮುಖ ಅಂತ್ಯಕ್ರಿಯೆ ನೆರವೇರಿಸಿದ್ದರು.