ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಮಳೆ ಮುಂದುವರೆದಿದೆ. ಭಟ್ಕಳದಲ್ಲಿ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ೬೬ ಮತ್ತು ಭಟ್ಕಳ ಮುಖ್ಯ ರಸ್ತೆ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಭಟ್ಕಳ ಜಲಾವೃತ : ಫೇಸ್‌ಬುಕ್ ರೀಲ್ / ಇನ್ಸ್ಟಾಗ್ರಾಂನಲ್ಲಿ ರೀಲ್
ಭಾರೀ ಮಳೆ ಸುರಿದ ಪರಿಣಾಮ ಭಟ್ಕಳದ ರಂಗಿನಕಟ್ಟೆ, ಸಂಶುದ್ದೀನ್ ವೃತ್ತ ಜಲಾವೃತಗೊಂಡಿದೆ. ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ನೀರು ನಿಂತಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಅಬ್ಬರದ ಮಳೆ ಸುರಿದು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಂಗೀಕಟ್ಟೆ ಪ್ರದೇಶದಲ್ಲಿ ಹೆದ್ದಾರಿ ಈ ಬಾರಿಯೂ ಹೊಳೆಯಾಗಿದೆ ಹೀಗಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗುಡ್ಡ ಕುಸಿತ, ಸಂಚಾರಕ್ಕೆ ಅಡಚಣೆ
ಕಳೆದ ವರ್ಷ ಕೂಡ ಇಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿ ಜನರಿಗೆ, ವಾಹನ ಸವಾರರಿಗೆ ತೊಂದರೆಯಾದಾಗ ಪ್ರತಿಭಟನೆ ನಡೆಸಲಾಗಿತ್ತು. ಸಚಿವ ಮಂಕಾಳ ವೈದ್ಯ ಅವರು ಸ್ಥಳಕ್ಕೆ ಆಗಮಿಸಿ ಆವಾಜ್ ಹಾಕಿದ್ದರು.
ಆದರೂ ಸಮರ್ಪಕವಾಗಿ ಕೆಲಸವನ್ನ ಮಾಡದೇ ಇರುವುದರಿಂದ ಮತ್ತೆ ಪರಿಸ್ಥಿತಿ ಪುನರಾವರ್ತನೆಯಾಗಿದೆ.
ಇದನ್ನೂ ಓದಿ : ಭಟ್ಕಳ ತಾಲೂಕಿನಾದ್ಯಂತ ಎರಡ್ಮೂರು ದಿನಗಳಿಂದ ವರುಣಾರ್ಭಟ
ಕಳೆದ ಹಲವು ವರ್ಷಗಳಿಂದ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಪರದಾಟ ಎನ್ನುವಂತಾಗಿದ್ದು ರವಿವಾರ ಸುಮಾರು ೩ ರಿಂದ ೪ ಅಡಿ ನೀರು ಹೆದ್ದಾರಿಯಲ್ಲಿ ನಿಂತಿದ್ದರಿಂದ ವಾಹನಗಳು ಸುಮಾರು ಅರ್ಧ ಕಿ.ಮಿ.ಗೂ ಹೆಚ್ಚು ದೂರವನ್ನು ಕ್ರಮಿಸುವುದಕ್ಕೆ 15 ನಿಮಿಷ ತೆಗೆದುಕೊಂಡವು. ಬೆಳಿಗ್ಗೆಯಿಂದ ಸಂಜೆಯ ತನಕವೂ ಒಂದೇ ರೀತಿಯಾಗಿತ್ತು.
ಇದನ್ನೂ ಓದಿ : ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಸೇವಿಸುತ್ತಿದ್ದವನ ವಿರುದ್ಧ ಪ್ರಕರಣ
ಅಂಬುಲೆನ್ಸ್ ಪರದಾಟ :
ಅಂಬುಲೆನ್ಸ್ ಗಳೂ ಕೂಡಾ ಈ ಭಾಗವನ್ನು ದಾಟಲು ಸುಮಾರು ೧೦ ನಿಮಿಷಕ್ಕೂ ಹೆಚ್ಚು ಸಮಯ ಹಿಡಿದವು. ಎಲ್ಲಿಯೋ ದೂರದಿಂದ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮವಾಗಿ ಸಾಗಿ ಆಸ್ಪತ್ರೆಗೆ ಹೋಗಬಹುದು ಎನ್ನುವ ನಂಬಿಕೆಯಿಂದ ಅಂಬುಲೆನ್ಸ್ ನಲ್ಲಿ ಬರುವ ರೋಗಿ ಹಾಗೂ ರೋಗಿಯ ಪಾಲಕರ ಚಿಂತನೆ ಹುಸಿಯಾಯಿತು. ಆಸ್ಪತ್ರೆಗೆ ಬೇಗ ತಲುಪುವ ಅವರನ್ನು ಹಕ್ಕನ್ನು ಕೂಡ ಹೆದ್ದಾರಿ ಇಲಾಖೆ ಕಸಿದುಕೊಂಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಯಿತು.ಅಂಬುಲೆನ್ಸ್ ಪರದಾಟ: ಫೇಸ್‌ಬುಕ್ ರೀಲ್ / ಇನ್ಸ್ಟಾಗ್ರಾಂನಲ್ಲಿ ರೀಲ್