ಭಟ್ಕಳ: ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ ಈಗ ಅಭಿವೃದ್ಧಿಯ ದೃಷ್ಟಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಕೆ.ಪಿ.ಸಿ.ಸಿ. ಮುಖ್ಯ ವಕ್ತಾರ ಐವನ್ ಡಿಸೋಜಾ ಹೇಳಿದರು. ಅವರು ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬಿಜೆಪಿಗರು ಜಾತಿ-ಧರ್ಮದ ಹೆಸರಿನಲ್ಲಿ ಚುನಾವಣೆ ನಡೆಸಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿಯ ಬಗ್ಗೆ ಚುನಾವಣೆ ಮಾಡಿರಲಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಅಭ್ಯರ್ಥಿಯಾಗಿ ಬಂದ ಮೇಲೆ ಅಭಿವೃದ್ಧಿಯ ಪರ್ವ ಪ್ರಾರಂಭವಾಗುತ್ತದೆ. ಅವರು ಕಳೆದ 30 ವರ್ಷಗಳಿಂದ ಈ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿರಲಿಲ್ಲ. ಈ ಜಿಲ್ಲೆಗೆ ಬೇಕಾದ ಯಾವುದೇ ದೊಡ್ದ ಯೋಜನೆಯಾಗಲಿ, ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅರಣ್ಯ ಸಮಸ್ಯೆ ಹಾಗೂ ಪ್ರವಾಸೋದ್ಯಮ ಕೂಡ ಅಭಿವೃದ್ಧಿ ಮಾಡಿಲ್ಲ. ಈ ಜಿಲ್ಲೆಗೆ ಏನು ಅಭಿವೃದ್ಧಿ ಮಾಡಲು ಅವಕಾಶಗಳಿತ್ತೋ ಅದ್ಯಾವ ಅಭಿವೃದ್ಧಿ ಕೂಡ ಮಾಡಿಲ್ಲ ಎಂದು ಐವನ್ ಡಿಸೋಜಾ ಹೇಳಿದರು.
ಇದನ್ನೂ ಓದಿ : ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ
ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರದಿಂದ ಬರಬೇಕಾದ ಯಾವ ಯೋಜನೆ ಕೂಡ ತಂದಿಲ್ಲ. ಅದೇ ರೀತಿ ಯುವಕರಿಗೆ ಉದ್ಯೋಗಾವಕಾಶಗಳ ಯೋಜನೆ ತರುವಲ್ಲಿ ಕೂಡ ಬಿಜೆಪಿ ವಿಫಲವಾಗಿದೆ. ಈ ಜಿಲ್ಲೆಯ ಅಭಿವೃದ್ಧಿ ಕಡೆ ತಲೆ ಹಾಕದೆ ಬರಿ ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಚುನಾವಣೆ ಎದುರಿಸಿದೆ ಹೊರತು ಯಾವುದೇ ರೀತಿ ಅಭಿವೃದ್ಧಿ ಕಡೆ ಗಮನ ಕೊಟ್ಟಿಲ್ಲ. ಹಾಗಾಗಿ ಸದ್ಯ ಅಭಿವೃದ್ಧಿ ಕಡೆ ಗಮನ ಕೊಡಬೇಕಾದ ಕಾಲ ಪ್ರಾರಂಭವಾಗಿದೆ ಎಂದರು.
ಬಿಜೆಪಿಯ ಎಂ.ಪಿ.ಗಳು ಈ ರಾಜ್ಯದ ಅಭಿವೃದ್ಧಿಗಾಗಿ ಏನು ಕೆಲಸ ಮಾಡಿದ್ದೀರಿ ಎಂಬ ಬಗ್ಗೆ ರಾಜ್ಯದ ಜನರ ಮುಂದೆ ಚರ್ಜೆಗೆ ಬರಲು ಹೇಳಿದರೆ ಯಾರು ಕೂಡ ಮುಂದೆ ಬರುತ್ತಿಲ್ಲ. ಏನೇ ಕೇಳಿದರೂ ಮೋದಿ ಮೋದಿ ಎನ್ನುತ್ತಾರೆ. ಮೋದಿ ಈ ದೇಶದ ಪ್ರದಾನ ಮಂತ್ರಿಯಾಗಿರಬಹುದು. ಆದರೆ ಈ ಭಾಗದ ಪ್ರತಿನಿಧಿಯಾಗಿ ನೀವು ಏನು ಕೆಲಸ ಮಾಡಿದ್ದೀರಿ. ಅಥವಾ ಮೋದಿ ಈ ರಾಜ್ಯಕ್ಕೆ ಏನು ಮಾಡಿದ್ದಾರೆ. ಇದರ ಬಗ್ಗೆ ಸ್ಪಲ್ಪ ಹೇಳಿ ಎಂದರೆ ಬಿಜೆಪಿ ಸಂಸದರ ಬಳಿ ಉತ್ತರ ಇಲ್ಲ. ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಏನೂ ಮಾಡದೆ ಸಾಮಾನ್ಯ ಜನರು ಬದುಕದಂತೆ ಅಸಾದ್ಯವಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಕೇವಲ ಕೋಮು ಗಲಭೆ ಸೃಷ್ಟಿ ಮಾಡುವುದು, ಜಾತಿ ಧರ್ಮವನ್ನು ಬೆರೆಸಿ ರಾಜಕಾಣ ಮಾಡಿದೆ. ಹಾಗಾಗಿಯೇ ರಾಜ್ಯದ ಜನ ಇಂದು ಇದಕ್ಕೆಲ್ಲ ಒಂದು ಪೂರ್ಣ ವಿರಾಮ ಹಾಕಲು ಕಾಯುತ್ತಿದ್ದಾರೆ. ಅಂತಹ ರಾಜಕಾರಣವನ್ನು ದೂರವಿಟ್ಟು, ಅಭಿವೃದ್ಧಿ, ಯುವಕರಿಗೆ ಉದ್ಯೋಗವಕಾಶ ಹಾಗೂ ಸಾಮಾನ್ಯ ಜನರ ಬದುಕುಹಸನಾಗ ಬೇಕು ಎನ್ನುವ ದೃಷ್ಟಿಯಿಂದ ಇಂದು ಚುನಾವಣೆ ನಡೆಯುತ್ತಿದೆ ಎಂದರು.
ಈ ದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ರಚನೆಯಾಗಿದೆ. ಇದಕ್ಕೆ ಅಭೂತ ಪೂರ್ವ ಬೆಂಬಲ ಇಡೀ ದೇಶದಲ್ಲಿ ಎಲ್ಲಾ ರಾಜ್ಯದಲ್ಲಿ ಕಂಡು ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ೨೦ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕೆಂಬುದು ನಮ್ಮ ಟಾರ್ಗೆಟ್ ಆಗಿದೆ. ಆದರೆ ೨೦ಕ್ಕಿಂತ ಅಧಿಕ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂಬ ಸನ್ನಿವೇಶ ಕರ್ನಾಟಕ ರಾಜ್ಯದಲ್ಲಿ ನಿರ್ಮಾಣವಾಗಿದೆ. ಜೂನ್ ೪ಕ್ಕೆ ರಾಜ್ಯದಲ್ಲಿ ದೊಡ್ಡ ಫಲಿತಾಂಶ ಬರಲಿದೆ. ಅದು ಜನಪರವಾದಂತಹ ಫಲಿತಾಂಶ. ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಬಹುಮತದಲ್ಲಿ ಲೋಕಾಸಭಾ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರ ನಾಡಿ ಮಿಡಿತವನ್ನು ನಾನು ತಿಳಿದುಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.