ಕಾರವಾರ : ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ಒಂದನೇ ಸೆಮಿಸ್ಟರ್ Junior M.Sc (forestry) ವಿದ್ಯಾರ್ಥಿಗಳಿಗೆ Genral Statistical Methods and Computer Applications ವಿಷಯವನ್ನು ಬೋಧಿಸಲು ಅರೆಕಾಲಿಕ ಉಪನ್ಯಾಸಕ ಹುದ್ದೆಗೆ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ : ಅಚ್ಚರಿಯ ಆಯ್ಕೆ : ಓವೈಸಿ ವಿರುದ್ಧ ತ್ರಿವಳಿ ತಲಾಖ್ ಹೋರಾಟಗಾರ್ತಿ

ಅರೆಕಾಲಿಕ ಉಪನ್ಯಾಸಕ ಹುದ್ದೆಯ ಅವಧಿಯು ೧೭೯ ತಿಂಗಳು ಅಥವಾ ಸೆಮಿಸ್ಟರ್ ಅಂತ್ಯದವರೆಗೆ ಯಾವುದು ಮೊದಲು ಅದು ಇರುತ್ತದೆ. ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯ ಪ್ರತಿಗಳೊಂದಿಗೆ ಮಾರ್ಚ್ ೧೧ರಂದು ಮಧ್ಯಾಹ್ನ ೩ ಗಂಟೆಗೆ ಡೀನ್ (ಅರಣ್ಯ) ಅರಣ್ಯ ಮಹಾವಿದ್ಯಾಲಯ ಶಿರಸಿ ರವರ ಕಾರ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಅವುಗಳ ದೃಢೀಕೃತ ೨ ಪ್ರತಿಗಳನ್ನು ಸಂದರ್ಶನ ಸಮಯದಲ್ಲಿ ತರಬೇಕು. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು.
ವಿದ್ಯಾರ್ಹತೆ, ಗೌರವಧನ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ಡೀನ್ (ಅರಣ್ಯ) ಅರಣ್ಯ ಮಹಾವಿದ್ಯಾಲಯ ಶಿರಸಿ ಕಚೇರಿಯನ್ನು ಸಂಪರ್ಕಿಸುವಂತೆ ಡೀನ್ (ಅರಣ್ಯ) ಅರಣ್ಯ ಮಹಾವಿದ್ಯಾಲಯ ಶಿರಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಡಿಯೋ ನೋಡಿ : ಕರಡಿ ಮರಿಗಳ ಮುದ್ದಿನ ಆಟ  https://www.facebook.com/share/r/egBaEMGU5AmMhdmn/?mibextid=oFDknk