ಭಟ್ಕಳ: ತಾಲೂಕಿನ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಿಪೂರ್ವಕವಾಗಿ ನಡೆಯುತ್ತಿದೆ. ಅಳ್ವೆಕೋಡಿಯಲ್ಲಿ ಇಂದು ಲಕ್ಷಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಸಹಿತ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮವು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್‌ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುತ್ತಿದೆ. ಪ್ರತಿ ನಿತ್ಯ ದೇವಸ್ಥಾನದಲ್ಲಿ ಜನ ಸಾಗರವೇ ಹರಿದು ಬರುತ್ತಿದೆ. ಪ್ರತಿ ನಿತ್ಯ ಮಹಾ ಅನ್ನಸಂತರ್ಪಣೆ ಜರುಗುತ್ತಿದೆ. ನೂರಾರು ಮಹಿಳೆಯರು ಏಕ ಕಾಲದಲ್ಲಿ ಕುಂಕುಮಾರ್ಚನೆಯನ್ನು ಮಾಡುತ್ತಿದ್ದಾರೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಇದನ್ನೂ ಓದಿ : ಕುಮಟಾ ತಾಲೂಕಿನಲ್ಲಿ ೧೦ ಡೆಂಗ್ಯೂ ಪ್ರಕರಣ ಪತ್ತೆ

ಇಂದಿನ ಕಾರ್ಯಕ್ರಮ:
ಅಳ್ವೆಕೋಡಿಯಲ್ಲಿ ಇಂದು (ಜು.6ರಂದು) ಬೆಳಿಗ್ಗೆ ಗಣಪತಿ ಪೂಜನ, ಪುಣ್ಯಾಹ ವಾಚನ, ಸ್ಥಳ ಶುದ್ದಿ, ಅವಾಹಿತ ದೇವತಾ ಪೂಜನ, ಅಂಶತಃ ಜಪ, ಪಾರಾಯಣ, ಶ್ರೀ ಮನ್ಯು ಸೂಕ್ತ ಹವನ, ಅಂಶತಃ ಶ್ರೀ ಸೂಕ್ತಹವನ, ಲಕ್ಷ ಕುಂಕುಮಾರ್ಚನೆ, ಲಘು ಪೂರ್ಣಾಹುತಿ, ಮಹಾ ಮಂಗಳಾರತಿ, ಯತಿ ಬ್ರಾಹ್ಮಣ ಸಮಾರಾಧನೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೪ ಗಂಟೆಗೆ ಸ್ಥಳೀಯ ಮಹಿಳೆಯರಿಂದ ಲಲಿತಾ ಸಹಸ್ರನಾಮ, ಭಜನಾ ಕಾರ್ಯಕ್ರಮ, ಹಾಗೂ ರಾತ್ರಿ ೯ ಗಂಟೆಯಿಂದ ಮುಂಬೈನ ಸಂತನ್ ಶುಕ್ಲ ಸವರಸಪ್ತಕ ಮ್ಯೂಸಿಕ್ ಟ್ರಸ್ಟ್ ಅವರಿಂದ ಭಕ್ತಿಗಾಯನ ಕಾರ್ಯಕ್ರಮ ನಡೆಯಲಿದೆ.