ಭಟ್ಕಳ: ಕಸಾಯಿಖಾನೆಗೆ ಸಾಗಿಸಲು ಯತ್ನಿಸಿ ಅಜ್ಞಾತ ಸ್ಥಳದಲ್ಲಿ ಕೂಡು ಹಾಕಿದ್ದ ಆಕಳ ಕರುವನ್ನು ರಕ್ಷಿಸಿದ ಹಿಂದೂ ಕಾರ್ಯಕರ್ತರು ಅದನ್ನು ಗೋಶಾಲೆಗೆ ಸಾಗಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಇದನ್ನೂ ಓದಿ : ದೇಶದ ಕೆಲವೆಡೆ ರಾಷ್ಟ್ರೀಯವಾದಿಯಾಗುವುದು ಕಷ್ಟ : ಹೀಗೆ ಹೇಳಿದ್ದೇಕೆ?

ಇಲ್ಲಿನ ಸಂತೆ ಮಾರುಕಟ್ಟೆಯ ಸಮೀಪದಲ್ಲಿ ಕರುವೊಂದು ಕೂಗಿದ ಶಬ್ದ ಕೇಳುತ್ತಿತ್ತು. ಇದನ್ನು ಗಮನಿಸಿದ ಪ್ರಾಣಿ ದಯಾ ಸಂಘದ ಸದಸ್ಯ ನಾಗಪ್ರಸಾದ್ ಸಮೀಪ ಹೋಗಿ ನೋಡಿದಾಗ ಆಕಳ ಕರುವನ್ನು ಕುತ್ತಿಗೆಗೆ ಕಟ್ಟಿ ಕೂಡಿ ಹಾಕಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅವರು ಹಿಂದೂ ಕಾರ್ಯಕರ್ತರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಸರಕೇರಿಯ ರಾಜೇಶ ನಾಯ್ಕ ಹಾಗೂ ಇತರ ಹಿಂದೂ ಕಾರ್ಯಕರ್ತರು ಭಟ್ಕಳ ನಗರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಠಾಣೆ ಸಿಬ್ಬಂದಿ ಆಗಮಿಸಿ ಆಕಳ ಕರು ರಕ್ಷಿಸಿ ಮುರುಡೇಶ್ವರದ ಧೇನು ಗೋಶಾಲೆಗೆ ಸಾಗಿಸಿದ್ದಾರೆ.

ನಿರಂತರ ಮಾಹಿತಿ ಮತ್ತು ಸುದ್ದಿಗಾಗಿ ಭಟ್ಕಳಡೈರಿ ವೆಬ್ಸೈಟ್ ಪೇಜ್  ಫಾಲೋವ್ ಮಾಡಿ. ಇಲ್ಲಿ ಒತ್ತಿ

ಸಾರ್ವಜನಿಕರಿಂದ ಆಗ್ರಹ:
ಪಟ್ಟಣದಲ್ಲಿ ಪ್ರತಿದಿನ ಗೋವುಗಳು ನಾಪತ್ತೆಯಾಗುತ್ತಿವೆ. ಭಟ್ಕಳದ ಸಂತೆ ಮಾರುಕಟ್ಟೆ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ಮಧ್ಯರಾತ್ರಿ ಹಲವು ದಿನಗಳಿಂದ ಗೋವುಗಳನ್ನು ವಾಹನಗಳಲ್ಲಿ ತುಂಬಿ ಕಸಾಯಿಖಾನೆಗೆ ಸಾಗಿಸುವ ತಂಡ ಸಕ್ರೀಯವಾಗಿದೆ. ಪೊಲೀಸರು ರಾತ್ರಿ ಸಮಯದಲ್ಲಿ ಪಟ್ಟಣದಲ್ಲಿ ಸಂಚರಿಸುವ ವಾಹನದ ಮೆಲೆ ನಿಗಾ ಇಡಬೇಕು. ಅಂತಹ ವಾಹನದ ನಂಬರನ್ನು ನೊಂದಾಯಿಸಿಕೊಂಡು ಗೋವು ಕಳ್ಳರನ್ನು ಹಿಡಿದು ಶಿಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.