ಬೆಳಗಾವಿ : ಬೆಳಗಾವಿಯ ಪ್ರಸಿದ್ಧ ಆದಿತ್ಯ ಮಿಲ್ಕ್ ಮಾಲೀಕ ಶಿವಕಾಂತ ಸಿದ್ನಾಳ ಇಂದು(ಏ.೬) ನಿಧನರಾಗಿದ್ದಾರೆ.

ಇದನ್ನೂ ಓದಿ : ಅಪಘಾತ-ಅವಘಡ ಸುದ್ದಿಗಳು : ಎಲ್ಲೆಲ್ಲಿ ಏನೇನು ?

೪೯ ವರ್ಷ ವಯಸ್ಸಿನ ಶಿವಕಾಂತ ಸಿದ್ನಾಳ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮಧ್ಯಾಹ್ನ ೧.೩೦ರ ಸುಮಾರಿಗೆ ಅವರು ಕ್ಯಾಂಪ್ ಪರಿಸರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಇವರು ಮಾಜಿ ಸಂಸದ ದಿವಂಗತ ಎಸ್.ಬಿ.ಸಿದ್ನಾಳ ಅವರ ಪುತ್ರ ಹಾಗೂ ವಿ ಆರ್ ಎಲ್ ಸಮೂಹ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರ ಅವರ ಅಳಿಯ. ಶಿವಕಾಂತ್ ಸಿದ್ನಾಳ್ ಅವರು ೨೦೦೪ರಲ್ಲಿ ವಿಜಯ ಸಂಕೇಶ್ವರ ಅವರ ಕನ್ನಡ ನಾಡು ಪಕ್ಷದಿಂದ ಕಿತ್ತೂರು ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧೆಗಿಳಿದು ಗಮನಸೆಳೆದಿದ್ದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.