ಕಾರವಾರ : ೧೦ ಹೆಚ್.ಪಿ.ವರೆಗಿನ ರೈತರ ನೀರಾವರಿ ಪಂಪ್ ಸೆಟ್ ಸ್ಥಾವರಗಳಿಗೆ ಹೆಸ್ಕಾಂಗಳಲ್ಲಿ ನೋಂದಣಿಯಾಗಿರುವ ಗ್ರಾಹಕರ ಹೆಸರಿನಲ್ಲಿರುವ ಆಧಾರ ಸಂಖ್ಯೆಗಳನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಆಧಾರ ಜೋಡಣೆಯಿಲ್ಲದ ಸ್ಥಾವರಗಳಿಗೆ ಸರ್ಕಾರದಿಂದ ಸಹಾಯಧನ (ಸಬ್ಸಿಡಿ) ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕೆ.ಇ.ಆರ್.ಸಿ. ಆದೇಶಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕುಮಟಾ ಉಪ-ವಿಭಾಗ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೋಂದಾಯಿತ ನೀರಾವರಿ ಗ್ರಾಹಕರು ತಮ್ಮ ನೋಂದಣಿ ಹೆಸರಿನಲ್ಲಿರುವ ಆಧಾರ ಸಂಖ್ಯೆಯನ್ನು ಕುಮಟಾ ಉಪ-ವಿಭಾಗ ಕಛೇರಿಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬೇಕು. ಆಧಾರ ಜೋಡಣೆಯಿಲ್ಲದ ಸ್ಥಾವರಗಳಿಗೆ ಸಹಾಯಧನ ಸಿಗದು ಎಂದು ಕುಮಟಾದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಮೀನುಗಾರಿಕೆ ಅಲ್ಲ, ಮೀನುಗಾರರ ಇಲಾಖೆ ಎಂದ ಸಚಿವ ಮಂಕಾಳ