ಭಟ್ಕಳ: ಮಾರ್ಚ್ ೨೦೨೪ರಂದು ನಡೆದ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಆನಂದ ಆಶ್ರಮ ಕಾನ್ವೆಂಟ್ ಸಂಯುಕ್ತ ಪ್ರೌಢಶಾಲೆಯ ಪಿ.ಯು. ಫಲಿತಾಂಶ ಪ್ರಕಟವಾಗಿದೆ. ಕಾಲೇಜಿನ ಫಲಿತಾಂಶ ಶೇ.೯೮.೭೬ ಆಗಿದೆ.
ಇದನ್ನೂ ಓದಿ : ರಘುನಾಥ ಪಿ. ರಾಯ್ಕರ್ ನಿಧನ
ವಿಜ್ಞಾನ ವಿಭಾಗ :
ವಿಜ್ಞಾನ ವಿಭಾಗದಲ್ಲಿ ಶೇ.೯೭.೨೨ ಸಾಧನೆ ಮಾಡಿದ್ದಾರೆ. ಓರ್ವ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಾನೆ. ಸುಮಿತ್ರಾ ದಿನೇಶ ನಾಯಕ ಶೇ.೯೭.೫, ರಜತ್ ಕೆ. ನಾಯ್ಕ ಶೇ.೯೫.೬೬, ಸುಮಿತ್ ಶ್ರೀಧರ ಭಟ್ಟ ಶೇ.೯೫.೬೬, ಮೊಹಮ್ಮದ್ ಇಬ್ರಾಹಿಂ ಶಾಬಂದ್ರಿ ಶೇ.೯೩.೮೩, ಅಬು ಮೊಹಮ್ಮದ್ ಶಾಪ್ ಶೇ.೯೨.೮, ಖಾನ್ ಮೊಹಮ್ಮದ್ ಅಫಿ ಶೇ.೯೨.೩, ಧನ್ಯ ಕೆ. ಶೇಟ್ ಶೇ.೯೧.೮, ಅಜ್ಮಾನ್ ಶೇಖ್ ಶೇ.೯೦.೧ರಷ್ಟು ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ವಾಣಿಜ್ಯ ವಿಭಾಗ :
ವಾಣಿಜ್ಯ ವಿಭಾಗದಲ್ಲಿ ಶೇ.೧೦೦ ಫಲಿತಾಂಶ ಆಗಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಲ್ಫಿದಾ ಶೇ.೯೫.೩೩, ನಿಮಿತಾ ಸತೀಶ ಶೇಟ್ ಶೇ.೯೩.೬೬, ರಷ್ಮಿ ಮಂಜುನಾಥ ನಾಯ್ಕ ಶೇ.೯೧.೬೬, ಸಾರಿಕಾ ಅಂತೋನ್ ಡಿಸೋಜ ಶೇ.೯೦.೧೬ ಅಂಕಗಳನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಆನಂದ ಆಶ್ರಮ ಕಾನ್ವೆಂಟ್ ಸಂಯುಕ್ತ ಪಿಯು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಸಿಸ್ಟರ್ ಮಿಲ್ಲಿ ಫರ್ನಾಂಡಿಸ್, ಪ್ರಾಂಶುಪಾಲೆ ಸಿಸ್ಟರ್ ವಿನುತಾ ಡಿಸೋಜ ಅಭಿನಂದಿಸಿದ್ದಾರೆ.