ಭಟ್ಕಳ : ಆರೋಗ್ಯ ಭಾರತಿ, ಅಮಿತಾಕ್ಷ ಯೋಗ ಟ್ರಸ್ಟ್ ಮತ್ತು ಅದಮ್ಯ ಸಂಕಲ್ಪ ಪ್ರತಿಷ್ಠಾನ ಭಟ್ಕಳ ಇವರ ಸಹಯೋಗದೊಂದಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಭವನ ಮುಟ್ಟಳ್ಳಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳದ ಗಣೇಶ ನೇತ್ರಾಲಯ ಮತ್ತು ನಾಯಕ ಹೆಲ್ತ್ ಸೆಂಟರ್ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಾಯಕ ಹೆಲ್ತ್ ಸೆಂಟರಿನ ನೇತ್ರ ತಜ್ಞ ಡಾ.ವಿಶ್ವನಾಥ್ ನಾಯಕ, ಮಾನವನಿಗೆ ಜೀವನ ನಡೆಸಲು ಅತ್ಯಂತ ಅವಶ್ಯಕ ಮತ್ತು ಸೂಕ್ಷ್ಮ ಅಂಗ ಕಣ್ಣು. ಅದನ್ನು ಎಲ್ಲರೂ ಜತನದಿಂದ ಕಾಪಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ : ಉ.ಕ. ಜಿಲ್ಲಾ ನಾಮಧಾರಿ ಪ್ರತಿಷ್ಠಾನ ಉದ್ಘಾಟನೆ
ಆರ್ಥಿಕ ಸಮಸ್ಯೆ ಇದ್ದವರಿಗೆ ಇಲ್ಲಿ ಉಚಿತ ತಪಾಸಣೆಯೊಂದಿಗೆ ರಿಯಾಯಿತಿ ದರದಲ್ಲಿ ಕನ್ನಡಕ ನೀಡಲಾಗುವುದು. ಕಣ್ಣಿನ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದವರಿಗೆ ಗಣೇಶ ನೇತ್ರಾಲಯದಲ್ಲಿ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಹೆಚ್ಚಿನ ಆರ್ಥಿಕ ಸಂಕಷ್ಟದ ಸಮಸ್ಯೆ ಇದ್ದವರಿಗೆ ಸಂಪೂರ್ಣ ಉಚಿತ ಶಸ್ತ್ರ ಚಿಕಿತ್ಸೆಯ ಸೌಲಭ್ಯ ದೊರಕಿಸುವ, ವೈದ್ಯರ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಶಿಬಿರದ ಉದ್ದೇಶ ವಿವರಿಸಿದರು.
ಇದನ್ನೂ ಓದಿ : ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ೩ ಚಿನ್ನ, ೧ ಕಂಚು
ಊರಿನ ಪ್ರಮುಖ ವೆಂಕಟೇಶ ನಾಯ್ಕ ಮಾತನಾಡಿ, ಡಾ.ವಿಶ್ವನಾಥ ನಾಯಕರವರು ತಮ್ಮ ಚಿಕಿತ್ಸಾ ಘಟಕದಲ್ಲಿ ಕಣ್ಣಿನಲ್ಲಿರುವ ೧೨ ಸೆಂ.ಮೀ. ಉದ್ದದ ಹುಳವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿರುವ ಖ್ಯಾತಿ ಹೊಂದಿದ್ದಾರೆ. ಇವರು ಈ ಶಿಬಿರದಲ್ಲಿ ನಮ್ಮೊಂದಿಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಗ್ರಾಮಸ್ಥರು ಈ ಉಚಿತ ನೇತ್ರ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಇದನ್ನೂ ಓದಿ : ಮೇ ೨೭ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಆರೋಗ್ಯ ಭಾರತಿ ಜಿಲ್ಲಾ ಪ್ರಮುಖ ದೇವೇಂದ್ರ ಮಾತನಾಡಿ, ಆರೋಗ್ಯ ವ್ಯಕ್ತಿಯಿಂದ ಆರೋಗ್ಯ ಕುಟುಂಬ, ಆರೋಗ್ಯ ಕುಟುಂಬದಿಂದ ಆರೋಗ್ಯ ಸಮಾಜ ನಿರ್ಮಾಣದ ಕಲ್ಪನೆಯೊಂದಿಗೆ ಆರೋಗ್ಯ ಭಾರತಿ ರಾಷ್ಟ್ರವ್ಯಾಪಿ ಕೆಲಸ ಮಾಡುತ್ತಿದೆ. ಅದಮ್ಯ ಸಂಕಲ್ಪ ಪ್ರತಿಷ್ಠಾನವು ಶಿಕ್ಷಣ ಸಂಸ್ಕಾರ ಮತ್ತು ಸೇವಾ ಕ್ಷೇತ್ರದಲ್ಲಿ ಕಾರ್ಯ ನಡೆಸುತ್ತಿದೆ. ಮುಟ್ಟಳ್ಳಿ ಗ್ರಾಮವನ್ನು ಆರೋಗ್ಯ ಮತ್ತು ಆದರ್ಶ ಗ್ರಾಮವನ್ನಾಗಿ ಮಾಡಲು ತಮ್ಮೆಲ್ಲರ ಸಹಕಾರ ಅವಶ್ಯವಿದೆ ಎಂದು ತಿಳಿಸಿದರು. ವೇದಿಕೆಯ ಮೇಲೆ ಮುಟ್ಟಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವೆಂಕಟರಮಣ ನಾಯ್ಕ ಉಪಸ್ಥಿತರಿದ್ದರು.
ಇದನ್ನೂ ಓದಿ : ಕೊಡ್ಯಡ್ಕ ದೇವಸ್ಥಾನಕ್ಕೆ ಹೋದಾಗ ಪ್ರೇರಣೆ; ಬೆಳಗಾವಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ
ಉಚಿತ ತಪಾಸಣಾ ಶಿಬಿರದಲ್ಲಿ ನೂರಕ್ಕಿಂತ ಹೆಚ್ಚು ಗ್ರಾಮಸ್ಥರು ಭಾಗವಹಿಸಿ, ಶಿಬಿರದ ಉಪಯೋಗ ಪಡೆದುಕೊಂಡರು. ಶಿಬಿರದ ಯಶಸ್ಸಿಗೆ ಗಣೇಶ ನೇತ್ರಾಲಯ ಮತ್ತು ನಾಯಕ ಹೆಲ್ತ್ ಸೆಂಟರಿನ ಸಿಬ್ಬಂದಿ ವರ್ಗ, ಅದಮ್ಯ ಸಂಕಲ್ಪ ಪ್ರತಿಷ್ಠಾನದ ಸದಸ್ಯರು ಮತ್ತು ಗ್ರಾಮಸ್ಥರು ಸಹಕರಿಸಿದರು.
ಇದನ್ನೂ ಓದಿ : ಎಐಟಿಎಂ ಕಾಲೇಜು ವಾರ್ಷಿಕೋತ್ಸವ, ಪದವಿ ದಿನಾಚರಣೆ ಸಂಪನ್ನ