ಭಟ್ಕಳ : ತಾಲೂಕಿನ ಬೆಳಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಳೆ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಬೆಳಕೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಪನಕಟ್ಟೆಯ ಶ್ರೀ ವಾಸುಕಿ ಸೌಹಾರ್ದ ಸಹಕಾರಿ ಸಂಘ, ಮುಗುಳಿಕೋಣೆಯ ಭಟ್ಕಳ ತಾಲೂಕು ಗಾಣಿಗ ಸೇವಾ ಟ್ರಸ್ಟ್ ಜಂಟಿ ಸಹಯೋಗದಲ್ಲಿ ಈ ಶಿಬಿರ ಜರುಗಲಿದೆ.
ಇದನ್ನೂ ಓದಿ : ಗುಡ್ನಕಟ್ಟು ಹೊಳೆಗೆ ಶಾಶ್ವತ ತಡೆಗೋಡೆ ನಿರ್ಮಿಸಿಕೊಡಿ
ತಪಾಸಣೆ ಸೌಲಭ್ಯ :
1) ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ.
2) ಯಾವುದೇ ಆರೋಗ್ಯ ಕಾರ್ಡ್, ವಿಮೆ ಕಾರ್ಡ್ ಇದಲ್ಲಿ, ಕಣ್ಣಿಗೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆಗೆ ಪ್ರಸಾದ ನೇತ್ರಾಲಯದಲ್ಲಿ ಉಚಿತ ಚಿಕಿತ್ಸೆ.
3) ಕಣ್ಣಿನ ತಪಾಸಣೆ ಮಾಡಿ ಚಸ್ಮಾ ಬೇಕಾದಲ್ಲಿ ೫೦೦ ರೂಪಾಯಿ ವೆಚ್ಚದಲ್ಲಿ ಪ್ರಸಾದ ನೇತ್ರಾಲಯದವರು ಮನೆಯ ವಿಳಾಸಕ್ಕೆ ತಲುಪಿಸುತ್ತಾರೆ.