ಕಾರವಾರ : ಭಾರತೀಯ ಹವಾಮಾನ ಇಲಾಖೆಯು 2024 ರ ಮಾರ್ಚ್ ನಿಂದ ಮೇ ತಿಂಗಳವರೆಗಿನ ಉಷ್ಣತೆ ಮತ್ತು ಮಳೆಯ ದೀರ್ಘಾವಧಿ ಮುನ್ಸೂಚನೆಯನ್ನು ಮಾರ್ಚ್ 1, 2024 ರಂದು ಬಿಡುಗಡೆ ಮಾಡಿದೆ. ಇದರಲ್ಲಿ ಜೋಯಿಡಾ ತಾಲ್ಲೂಕಿನ ಕೆಲವು ಭಾಗಗಳನ್ನು ಹೊರತುಪಡಿಸಿ ಉತ್ತರ ಕನ್ನಡದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣತೆಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಸೂಚಿಸಲಾಗಿದೆ. ಈ ಹೆಚ್ಚಿನ ಉಷ್ಣತೆಯು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಅಗ್ನಿ ಅವಘಡಗಳ ಅಪಾಯವನ್ನು ಹೆಚ್ಚಿಸಬಹುದಾಗಿದೆ. ಇದಕ್ಕಾಗಿ ಕೆಲವು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಇದನ್ನೂ ಓದಿ : ಗಣಿಗಾರಿಕೆಗೆ ಸಾರ್ವಜನಿಕರ ವಿರೋಧ https://www.facebook.com/share/p/b2a28bzBHB8pzkJJ/?mibextid=oFDknk
ದೇಹದ ನೀರಿನಂಶ ಕಾಯ್ದುಕೊಳ್ಳಿ:
ಬಿಸಿಲಿನ ಉತ್ತುಂಗ ಸಮಯದಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡಿ ಮತ್ತು ಸಾಕಷ್ಟು ನೀರು ಕುಡಿಯಿರಿ, ತಂಪು ಪಾನೀಯಗಳಿಗಿಂತ ನೀರನ್ನು ಆಯ್ಕೆ ಮಾಡಿ.
ಇದನ್ನೂ ಓದಿ : ಉದ್ಯೋಗಾವಕಾಶ : ಮಾರ್ಚ್ ೧೨ರಂದು ಕಾರವಾರದಲ್ಲಿ ಉದ್ಯೋಗಮೇಳ
ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಿರಿ:
ಬಿಸಿಲಿನ ಸಮಯದಲ್ಲಿ ಹೊರಗೆ ಹೋಗಬೇಕಾದರೆ, ಟೋಪಿ, ಸನ್‌ಸ್ಟೀನ್ ಲೋಷನ್ ಮತ್ತು ಸೂರ್ಯನ ಕಿರಣಗಳನ್ನು ತಡೆಯುವಂತಹ ಬಟ್ಟೆಗಳನ್ನು ಧರಿಸಿ.
ಆರೋಗ್ಯದ ಮೇಲೆ ನಿಗಾ ವಹಿಸಿ:
ಅತಿಯಾದ ಬೆವರುವಿಕೆ, ಆಯಾಸ ಮತ್ತು ತಲೆತಿರುಗುವಿಕೆಯಂತಹ ಲಕ್ಷಣಗಳಿಗೆ ಗಮನ ಕೊಡಿ. ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ.
ಅಗ್ನಿ ಅವಘಡಗಳನ್ನು ತಡೆಯಿರಿ:
ಸುಟ್ಟುಗುಂಟೆಗಳನ್ನು ಎಚ್ಚರವಾಗಿ ನಂದಿಸಿ ಮತ್ತು ತೆರೆದ ಪ್ರದೇಶಗಳಲ್ಲಿ ಬೆಂಕಿ ಹಚ್ಚದಿರಿ. ಶಾರ್ಟ್ ಸರ್ಕ್ಯುಟ್‌ಗಳನ್ನು ತಡೆಯಲು ವಿದ್ಯುತ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ. ಉತ್ತರ ಕನ್ನಡದಲ್ಲಿ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ 1077/ 9483511015 (ವಾಟ್ಸಾಪ್) ಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.