ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯುವ ಸಮೂಹಕ್ಕೆ ಉದ್ಯೋಗಾವಕಾಶ ಬಾಗಿಲು ತೆರೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯರ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲಾ ಕೌಶಲ್ಯ ಮಿಷನ್ ಇವರ ಆಶ್ರಯದಲ್ಲಿ ಮಾರ್ಚ್ 12 ರಂದು ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಬೃಹತ್ ಉದ್ಯೋಗ ಮೇಳ ಮತ್ತು ಶಿಶಿಕ್ಷು ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ : ಭಟ್ಕಳಕ್ಕೆ ೧೩ರಂದು ಲೋಕಾಯುಕ್ತ ಅಧಿಕಾರಿಗಳು ಬರ್ತಾರೆ
ಈ ಉದ್ಯೋಗ ಮೇಳದಲ್ಲಿ ಸುಮಾರು 20 ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿಗಳು ಭಾಗವಹಿಸಲಿವೆ. ವಿವಿಧ ವಿದ್ಯಾರ್ಹತೆಯುಳ್ಳ ಸುಮಾರು 1500 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ/ಶಿಶಿಕ್ಷು ನಿಯೋಜನೆ ಪಡೆಯಲು ಅವಕಾಶ ಸಿಗಲಿದೆ.
ಈ ಉದ್ಯೋಗ ಮೇಳದಲ್ಲಿ ಟೊಯೋಟ ಕಿರ್ಲೋಸ್ಕರ ಮೊಟರ್ಸ್ ಪ್ರೈ. ಲಿ. ಕಂಪನಿ ಸಹ ಭಾಗವಹಿಸಲಿದ್ದು, ಸದರಿ ಕಂಪನಿಯವರು ಎಸ್.ಎಸ್.ಎಲ್.ಸಿ. ಉತ್ತೀರ್ಣ/ಅನುತ್ತೀರ್ಣರಾದ 18 ರಿಂದ 22 ವರ್ಷ ವಯೋಮಿತಿಯ ಯುವತಿಯರಿಗಾಗಿ ವಿಶ್ವ ದರ್ಜೆಯ ಆಟೋಮೋಟಿವ್ ವೆಲ್ಡ್ ತಂತ್ರಜ್ಞೆ, ಆಟೋಮೋಟಿವ್ ಪೇಂಟ್ ತಂತ್ರಜ್ಞೆ, ಆಟೋಮೋಟಿವ್ ಅಸೆಂಬ್ಲಿ ತಂತ್ರಜ್ಞೆ, ಮೆಕಾಟ್ರಾನಿಕ್ಸ್ ತಂತ್ರಜ್ಞೆ ವೃತ್ತಿಗಳಲ್ಲಿ ಮಾಸಿಕ ರೂ.14505 (1ನೇ ವರ್ಷ), ರೂ.15560 (2ನೇ ವರ್ಷ) ಸ್ಟೈಫಂಡ್ ಹಾಗೂ ಇತರ ಸೌಲಭ್ಯಗಳೊಂದಿಗೆ 2 ವರ್ಷದ ವಸತಿ ಸಹಿತ ಐ.ಟಿ.ಐ. ತರಬೇತಿ ನೀಡಲಿದ್ದಾರೆ. ಈ ತರಬೇತಿಯ ನಂತರದಲ್ಲಿ ಅಭ್ಯರ್ಥಿಗಳನ್ನು ಅಪ್ರೆಂಟಿಸ್‌ಗಳೆಂದು ನಿಯೋಜಿಸಿಕೊಳ್ಳಲಿದ್ದಾರೆ. ಅಪ್ರೆಂಟಿಸ್‌ಶಿಪ್ ಅವಧಿಯ ಮುಕ್ತಾಯದಲ್ಲಿ ಅವರಿಗೆ ಈ ಸಂಸ್ಥೆಯಲ್ಲಿ ಅಥವಾ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉತ್ತಮ ವೇತನ ಮತ್ತು ಇತರ ಸೌಲಭ್ಯಗಳ ಸಹಿತ ಉದ್ಯೋಗವನ್ನು ದೊರಕಿಸಿ ಕೊಡಲಿದ್ದಾರೆ ಎಂದು ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೂಗಲ್ ಫಾರ್ಮ್ ಮೂಲಕ ನೊಂದಾಯಿಸಿ :
SSLC/PUC/ITI/Diploma/Engineering/Degree/Post-Graduate Degree ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಇಲ್ಲಿ ಕೊಟ್ಟಿರುವ QR Code- Google Form ನಲ್ಲಿ ನೊಂದಾಯಿಸಿಕೊಳ್ಳಬೇಕು. ತಮ್ಮ ಶೈಕ್ಷಣಿಕ ದಾಖಲೆ/ಆಧಾರ ಕಾರ್ಡ, ಬಯೋಡಾಟಾ ಮತ್ತು ಭಾವಚಿತ್ರಗಳೊಂದಿಗೆ ತಮ್ಮ ವಿದ್ಯಾರ್ಹತೆಯ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 8861911982, 8310044796 ನ್ನು ಸಂಪರ್ಕಿಸಲು ಕೋರಲಾಗಿದೆ.
ಈ ವಿಡಿಯೋ ನೋಡಿ : ಖಾನಾಪುರದಲ್ಲಿ ಸಂಸದ ಹೆಗಡೆ ವಿರುದ್ಧ ರೈತರ ಆಕ್ರೋಶ https://www.facebook.com/share/v/HgdQZ6xuyhpC9Anh/?mibextid=oFDknk