ಭಟ್ಕಳ : ಕರಾವಳಿ ಕಾವಲು ಪಡೆಯ ಭಟ್ಕಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಎಸ್ಐ ಅಣ್ಣಪ್ಪ ಮೊಗೇರ ಅವರನ್ನು ಮಾ.29ರಂದು ಮಲ್ಪೆಯ ಕರಾವಳಿ ಕಾವಲು ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಬೀಳ್ಕೊಡುಗೆ ನೀಡಲಾಯಿತು.
ಇದನ್ನೂ ಓದಿ : ತಂದೆ-ತಾಯಂದಿರು ಓದಲೇಬೇಕಾದ ಸುದ್ದಿ!
ಬೀಳ್ಕೊಡುಗೆ ಸಮಾರಂಭದಲ್ಲಿ ಡಿ.ವೈ.ಎಸ್.ಪಿ. ಟಿ.ಎಸ್. ಶಫಿ, ಮಲ್ಪೆ ಠಾಣೆಯ ಇನ್ಸಪೆಕ್ಟರ್ ಸಂಪತ್ ಕುಮಾರ್, ಮಲ್ಪೆ ಹೆಡ್ ಕ್ವಾರ್ಟಸ್್ರ ಇನ್ಸ್‌ಪೆಕ್ಟರ್ ಪ್ರಮೋದ್, ಗಂಗೊಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ, ಕಾರವಾರದ ಇನ್ಸಪೆಕ್ಟರ್ ನಿಶ್ಚಲಕುಮಾರ್, ಮಂಜುನಾಥ ಬೇಲೆಕೇರಿ, ಭಟ್ಕಳ ಪ್ರಭಾರಿ ಸಬ್ ಇನ್ಸ್‌ಪೆಕ್ಟರ್ ವೀಣಾ ಚಿತ್ರಾಪುರ ಮುಂತಾದವರು ಉಪಸ್ಥಿತರಿದ್ದರು.
ನೈಜ ಮತ್ತು ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳದವರೇ ಆದ ಎಸ್ಐ ಅಣ್ಣಪ್ಪ ಮೊಗೇರ 1990ರಲ್ಲಿ ಪೊಲೀಸ್ ಇಲಾಖೆಗೆ ಪೇದೆಯಾಗಿ ಸೇರಿದ್ದರು. ಹಂತಹಂತವಾಗಿ ಬಡ್ತಿ ಹೊಂದುತ್ತಾ ಉಪ ನಿರೀಕ್ಷಕರಾಗಿ ನಿವೃತ್ತರಾಗಿದ್ದಾರೆ. ತಮ್ಮ ಸುಧೀರ್ಘ 34 ವರ್ಷಗಳ ಸೇವೆಯನ್ನು ಇಲಾಖೆಯ ಕಾರವಾರ, ಕದ್ರಾ, ಶಿರಸಿ, ಕುಮಟಾ, ಹೊನ್ನಾವರ, ಮಂಕಿ, ಮುರ್ಡೇಶ್ವರ, ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆಯಲ್ಲಿ ಸಲ್ಲಿಸಿದ್ದಾರೆ. ನಂತರ ಕರಾವಳಿ ಕಾವಲು ಪಡೆಯ ಮಲ್ಪೆ ಹೆಡ್ ಕ್ವಾರ್ಟರ್ಸ್ ಮಲ್ಪೆ ಠಾಣೆಯಲ್ಲಿ ಸೇವೆ ಮಾಡಿ ಭಟ್ಕಳ ಕರಾವಳಿ ಠಾಣೆಗೆ ವರ್ಗಾವಣೆಗೊಂಡಿದ್ದರು. ಭಟ್ಕಳದ ಕರಾವಳಿ ಕಾವಲು ಪಡೆಯ ಕಚೇರಿಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಠಾಣೆಯ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ತಮ್ಮ ಸೇವಾವಧಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗಿದ್ದು ಅಣ್ಣಪ್ಪ ಮೊಗೇರ. ಕಿರಿಯ ಅಧಿಕಾರಿಗಳಿಂದ ಸಹಕಾರ ಪಡೆದು ಉತ್ತಮ ಸೇವೆ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಎಲ್ಲರಿಂದಲೂ ಅಣ್ಣಪ್ಪಣ್ಣ ಎಂದು ಕರೆಯಿಸಿಕೊಳ್ಳುತ್ತಿರುವ ಇವರು ಜನಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದರು.