ಶಿರಸಿ: ರಾಜ್ಯ ಮಟ್ಟದ ಕದಂಬೋತ್ಸವ ಮಾರ್ಚ ೫ ಹಾಗೂ ೬ ರಂದು ತಾಲೂಕಿನ ಬನವಾಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.೫ರ ಸಂಜೆ ೬ಕ್ಕೆ ಉದ್ಘಾಟಿಸಲಿದ್ದಾರೆ.
ಬನವಾಸಿ ಮಯೂರವರ್ಮ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ಮಂಕಾಳ ವೈದ್ಯ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಕೃಷ್ಣೇ ಭೈರೇಗೌಡ, ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ವಿಪಕ್ಷ ನಾಯಕ ಆರ್.ಅಶೋಕ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ಇತರರು ಭಾಗವಹಿಸಲಿದ್ದಾರೆ. ಅಧ್ಯಕ್ಣತೆಯನ್ನು ಶಾಸಕ ಶಿವರಾಮ ಹೆಬ್ಬಾರ್ ವಹಿಸಲಿದ್ದಾರೆ. ಪಂಪ ಪ್ರಶಸ್ತಿ ಪುರಸ್ಕೃತ ನಾ.ಡಿಸೋಜ ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಮುರುಡೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಆಚರಣೆ ನಿಮಿತ್ತ ಪೂರ್ವಭಾವಿ ಸಭೆ
ಮಾ.೫ರ ಮಧ್ಯಾಹ್ನ ೨ಕ್ಕೆ ಮಧುಕೇಶ್ವರ ದೇವಸ್ಥಾನದ ಎದುರಿನಿಂದ ಕದಂಬ ಸಾಂಸ್ಕೃತಿಕ ಕಲಾ ಮೆರಣಿಗೆ ನಡೆಯಲಿದೆ. ಸಮಾರೋಪ ಸಮಾರಂಭ ಮಾ.೬ರ ಸಂಜೆ ೬ಕ್ಕೆ ಬನವಾಸಿಯಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಡಾ.ಜಮೀರುಲ್ಲ ಷರೀಫ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಉಮೇಶ ಮುಂಡಳ್ಳಿ ಅವರ ‘ಕಾಸ್ಮುಡಿ ಹನುಮಂತ ಬಾರೋ’ ಭಕ್ತಿಗೀತೆ ಬಿಡುಗಡೆ
ಎರಡು ದಿನಗಳ ಉತ್ಸವದ ಮೊದಲ ದಿನ ಸುಜಾತಾ ಧಾರವಾಡ ಭಕ್ತಿಸಂಗೀತ, ಶಹನಾಯಿ ಡಾ. ಕೃಷ್ಣ ಬಾಲ್ಲೇಶ, ವಚನ ಸಂಗೀತ ರೋಹಿಣಿ ಹಿರೇಮಠ, ಸುಗಮ ಸಂಗೀತ ಶಿರಸಿ ರತ್ನಾಕರ, ಭರತನಾಟ್ಯ ಡಾ. ಚೇತನಾ ರಾಧಾಕೃಷ್ಣನ್, ಶ್ರೇಯಾ ಪಾಟೀಲ, ಗಿಚ್ಚಿ ಗಿಲಿಗಿಲಿ ತಂಡ ಕಾಮಿಡಿ ಶೋ, ಕೃತ್ತಿಕಾ ದಯಾನಂದ ನೃತ್ತತ ವೈಭವ, ರವಿ ತಂಡದಿಂದ ಆಕ್ಸಿಜನ್ ಡಾನ್ಸ್ ನಡೆಯಲಿದೆ. ಬಳಿಕ ರಘು ದೀಕ್ಷಿತ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸದಿದ್ದರೆ ಟೋಲ್ ನಾಕಾ ಬಂದ್
ಮಾ. ೬ರ ಬೆಳಿಗ್ಗೆ ೧೦:೩೦ರಿಂದ ಕವಿ ಗೋಷ್ಠಿ ನಡೆಯಲಿದೆ. ಸಾಹಿತಿ ಆರ್.ಡಿ.ಹೆಗಡೆ ಆಲ್ಮನೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕವಿಗಳಾದ ಸುಧಾ ಆಡುಕಳ, ಪಿ.ಆರ್.ನಾಯ್ಕ, ಗಣಪತಿ ಬಾಳೆಗದ್ದೆ, ಶ್ರೀಧರ ಶೇಟ್, ಪದ್ಯಾಯಣ ಗೋವಿಂದ ಭಟ್ಟ, ನಾಗವವೇಣಿ ಹೆಗ್ಗರಸಿಮನೆ, ನಂದಿನಿ ಹೆದ್ದುರ್ಗ, ಕೃಷ್ಣ ನಾಯ್ಕ, ಡಾ. ಸಮೀರ ಹಾದಿಮನಿ ಭಾಗವಹಿಸುವರು. ಸಂತೋಷ ಕುಮಾರ ಮೆಹೆಂದಳೆ, ಬಿ.ಎನ್.ರಮೇಶ, ಜಿ.ಸು.ಬಕ್ಕಳ ಉಪಸ್ಥಿತ ಇರಲಿದ್ದಾರೆ. ಮಧ್ಯಾಹ್ನ ೨:೩೦ಕ್ಕೆ ಇತಿಹಾಸ ಗೋಷ್ಠಿ ನಡೆಯಲಿದೆ. ಕೆ.ಎನ್.ಹೊಸ್ಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೋಹನ ಭರಣಿ ವಿಷಯ ಮಂಡಿಸಲಿದ್ದಾರೆ.
ಸಂಜೆ ೫ರಿಂದ ಶಮಾ ಭಾಗವತ್ ಚಿತ್ರದುರ್ಗ ನೃತ್ಯ ರೂಪಕ, ರೇಖಾ ದಿನೇಶ ಸಂಗೀತ, ವಿನುತಾ ಯಲ್ಲಾಪುರ ನೃತ್ಯ, ನಿನಾದ ತಂಡದಿಂದ ತಬಲಾ ವಾದನ, ನಿರ್ಮಲಾ ಗೋಳಿಕೊಪ್ಪ ತಂಡದಿಂದ ಯಕ್ಷಗಾನ, ವಿಜೇತ ಸುದರ್ಶನ ಮತ್ತು ಬಸವರಾ ಬಂಟನೂರು ಅವರ ಸುಗಮ ಸಂಗೀತ, ರಮೀಂದರ ಖುರಾನ ಒಡಿಸ್ಸಿ ನೃತ್ಯ, ಬಸಯ್ಯ ಗುತ್ತೇದಾರ ಜಾನಪದ ಸಂಗೀತ, ಕೃಪಾ ಹೆಗಡೆ ಭರತನಾಟ್ಯ, ರಜತ್ ಹೆಗಡೆ ಹಾಗೂ ಶ್ರೀಲಕ್ಷ್ಮಿ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಬಳಿಕ ಹರಿಕೃಷ್ಣ ತಂಡದಿಂದ ಸಂಗೀತ ಸಂಭ್ರಮ ನಡೆಯಲಿದೆ.
ಪಂಪ ಪ್ರಶಸ್ತಿ ಪ್ರದಾನವಿಲ್ಲ!
ಸಾಂಪ್ರದಾಯಿಕವಾಗಿ ಪಂಪ ಪ್ರಶಸ್ತಿ ಕದಂಬೋತ್ಸವದಲ್ಲಿ ಪ್ರಧಾನ ಆಗಬೇಕಿತ್ತು. ಆದರೆ, ಈ ಬಾರಿ ಬೆಂಗಳೂರಿನಲ್ಲಿ ನಾ.ಡಿಸೋಜ ಅವರಿಗೆ ಪ್ರಧಾನ ಆಗಿದೆ. ಆದರೆ, ನಾ. ಡಿಸೋಜ ಅವರಿಗೆ ಆಹ್ವಾನ ಕಳಿಸಲಾಗಿದೆ.
ಗುಡ್ನಾಪುರ ಉತ್ಸವ :
ಕದಂಬೋತ್ಸವ ಹಿನ್ನಲೆಯಲ್ಲಿ ಕದಂಬ ಜ್ಯೋತಿ ಉದ್ಘಾಟನೆ ಮಾ.೩ರಂದು ಗುಡ್ನಾಪುರದಲ್ಲಿ ಬೆಳಿಗ್ಗೆ ೧೧ಕ್ಕೆ ನಡೆಯಲಿದೆ. ಸಂಜೆ ೫ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬನವಾಸಿಯ ಜಯಂತಿ ಕ್ರೀಡಾಂಗಣದಲ್ಲಿ ಅದೇ ದಿನ ಸಂಜೆ ೩ರಿಂದ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಲಿದೆ.