ಬೆಳಗಾವಿ : ಅಲ್ಲಿ ಕನ್ನಡಿಗ-ಕನ್ನಡತಿ ಮದುವೆಯ ಸಂಭ್ರಮ ಮನೆಮಾಡಿತ್ತು. ಅಂದಹಾಗೆ, ಇದೇನೂ ಕನ್ನಡಿಗ ಚಿತ್ರದ ಕಥೆಯಲ್ಲ, ಕನ್ನಡತಿ ಧಾರವಾಹಿಯ ಬಗ್ಗೆಯೂ ಅಲ್ಲ. ಹಾಗಾದರೆ ಏನಿದು ವಿಶೇಷ ಅಂತೀರಾ? ಮುಂದೆ ಓದಿ…
ಸ್ವಾಗತಕ್ಕೆ ಪ್ರವೇಶ ದ್ವಾರದಲ್ಲಿಯೇ ಚೆನ್ನಮ್ಮ, ರಾಯಣ್ಣ, ಬೆಳವಡಿ ಮಲ್ಲಮ್ಮ, ಬಸವಣ್ಣರ ಪ್ರತಿಮೆಗಳು! ಮಂಟಪದ ಪ್ರವೇಶ ದ್ವಾರದಿಂದ ವೇದಿಕೆಯವರೆಗೆ ಎಲ್ಲವೂ ಕನ್ನಡಮಯ!! ಮಂಟಪದೊಳಗೆ ಕನ್ನಡಿಗರಲ್ಲಿ ಕನ್ನಡಾಭಿಮಾನ ಹುಟ್ಟಿಸುವ ಸಾಲುಗಳುಳ್ಳ ಫಲಕಗಳು!!! ಹಾಗಂತ ಇದ್ಯಾವುದೂ ಕನ್ನಡ ಸಂಘಟನೆಯ ಕಾರ್ಯಕ್ರಮದ ದೃಶ್ಯವೂ ಅಲ್ಲ. ಬದಲಿಗೆ ಮದುವೆ ಸಮಾರಂಭವೊಂದರಲ್ಲಿ ಕಂಡ ದೃಶ್ಯವಿದು.
ಇದನ್ನೂ ಓದಿ : ವಿಷ್ಣು ನಾಯ್ಕ ಗರಡಿಯಲ್ಲಿ ಬೆಳೆದ ಸಾಹಿತಿ ಎಂಬ ಹೆಮ್ಮೆ : ಡಾ.ಜಮೀರುಲ್ಲ ಷರೀಫ್
ಹೌದು, ಕನ್ನಡಿಗ-ಕನ್ನಡತಿ ಮದುವೆಯ ದೃಶ್ಯವಿದು. ಇಡೀ ಮದುವೆಯ ವಾತಾವರಣವೇ ಕನ್ನಡಮಯವಾಗಿತ್ತು. ಬೆಳಗಾವಿಯ ಅಟೊನಗರದ ಕೆ.ಎಚ್. ಪಾಟೀಲ ಕಲ್ಯಾಣ ಮಂಟಪ ಸಂಪೂರ್ಣ ಕನ್ನಡಮಯ ವಾತಾವರಣದಲ್ಲಿತ್ತು.
ಈ ವಿಡಿಯೋ ನೋಡಿ : ಸರ್ಕಾರಿ ಶಾಲೆಯಲ್ಲಿ ಇಕೋ ಪಾರ್ಕ್ https://fb.watch/qsoBgBbDVN/?mibextid=Nif5oz
ಮೈ ಮನಸ್ಸುಗಳ ತುಂಬ ಕನ್ನಡವನ್ನೇ ತುಂಬಿಕೊಂಡ, ಕನ್ನಡವನ್ನೇ ಉಸಿರಾಗಿಸಿದ ಕನ್ನಡ ಯುವಕ, “ರಾಯಣ್ಣ ಪುಟದ” ನಿರ್ವಾಹಕರೂ ಆಗಿರುವ ದೀಪಕ ಮುಂಗರವಾಡಿಯ ವಿವಾಹ ಇಂದು ಕನ್ನಡತಿ ರಾಜೇಶ್ವರಿಯ ಜೊತೆಗೆ ಕನ್ನಡಮಯ ವಾತಾವರಣದಲ್ಲಿ ನೆರವೇರಿತು.
ಪ್ರವೇಶ ದ್ವಾರದಲ್ಲಿಯೇ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಸವೇಶ್ವರರ ಪ್ರತಿಮೆಗಳು ಸ್ವಾಗತಕ್ಕೆ
ನಿಂತಿದ್ದು ವಿಶೇಷವಾಗಿತ್ತು. ಹುಕ್ಕೇರಿ ಹಿರೇಮಠದ
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
ವಧುವರರನ್ನು ಆಶೀರ್ವದಿಸಲು
ಆಗಮಿಸಿದ್ದರು.
ಒಟ್ಟಿನಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನದ
ಒಂದು ಭಾಗದಂತೆ ಕಂಡು ಬಂದ ಈ ಮದುವೆ ಕನ್ನಡ ಹೋರಾಟಗಾರರಿಗೆ ಒಂದು ಮಾದರಿ ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹರ್ಷ ವ್ಯಕ್ತಪಡಿಸಿದ್ದಾರೆ.