ಹೊನ್ನಾವರ : ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ ‘ಕನ್ನಡ ಕೌಸ್ತುಭ’ ಪ್ರಶಸ್ತ್ರಿಗೆ ಮಹಾಲಕ್ಷ್ಮಿ ಗೋಪಾಲ ಶೆಟ್ಟಿ ಆಯ್ಕೆಯಾಗಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಜುಲೈ ೨೮ರಂದು ದಾವಣಗೆರೆಯಲ್ಲಿ ನಡೆಯುವ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಮಹಾಲಕ್ಷ್ಮಿ ೧೨೫ ಅಂಕ ಪಡೆದಿದ್ದರು. ಕನ್ನಡ ಕೌಸ್ತುಭ ಪ್ರಶಸ್ತಿಗೆ ಆಯ್ಕೆಯಾದ ಮಹಾಲಕ್ಷ್ಮಿ ಸಾಧನೆಗೆ  ಹಿತೈಷಿಗಳು, ಶಿಕ್ಷಕರು ಹಾಗೂ ಅಭಿಮಾನಿಗಳು ಅಭಿನಂದಿಸಿದ್ದಾರೆ. ಹಡಿನಬಾಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ಶೆಟ್ಟಿ ಇವರ ಪುತ್ರಿಯಾಗಿದ್ದಾಳೆ.

ಇದನ್ನೂ ಒತ್ತಿ : ಮನೆಯ ಗೋಡೆ ಮಳೆಗೆ ತೊಯ್ದು ಕುಸಿತ